alex Certify ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್: ಇಂದೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ; 9 ದಿನದಲ್ಲಿ 5.60 ರೂ. ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್: ಇಂದೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ; 9 ದಿನದಲ್ಲಿ 5.60 ರೂ. ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಕೂಡ ಏರಿಕೆಯಾಗಿದೆ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 80 ಪೈಸೆ ಏರಿಕೆಯಾಗಿ 101.01 ರೂಪಾಯಿಗೆ ತಲುಪಿದೆ. ಡೀಸೆಲ್ ದರ 80 ಪೈಸೆಯಷ್ಟು ಏರಿಕೆ ಕಂಡಿದ್ದು, 92.27 ರೂಪಾಯಿ ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ 84 ಪೈಸೆ, ಡೀಸೆಲ್ ಬೆಲೆ 85 ಪೈಸೆ ಏರಿಕೆಯಾಗಿದ್ದು, ಕ್ರಮವಾಗಿ 115.88 ರೂ., 100.10 ರೂಪಾಯಿಗೆ ತಲುಪಿದೆ.

ಅದೇ ರೀತಿ ಚೆನ್ನೈನಲ್ಲಿ ಪೆಟ್ರೋಲ್ 75 ಪೈಸೆ ಮತ್ತು ಡೀಸೆಲ್ 76 ಪೈಸೆ ಏರಿಕೆಯಾಗಿದ್ದು, 106.68 ರೂ., 96.76 ರೂಪಾಯಿಗೆ ತಲುಪಿದೆ.

ಕೊಲ್ಕತ್ತಾದಲ್ಲಿ ಪೆಟ್ರೋಲ್ 84 ಹಾಗೂ ಡೀಸೆಲ್ 80 ಪೈಸೆ ಏರಿಕೆಯಾಗಿದ್ದು, 110.52, 95.42 ರೂಪಾಯಿಗೆ ತಲುಪಿದೆ.

ಬುಧವಾರ ಪೆಟ್ರೋಲ್ ಬೆಲೆ ಲೀಟರ್‌ ಗೆ 80 ಪೈಸೆ ಮತ್ತು ಡೀಸೆಲ್‌ ಗೆ 80 ಪೈಸೆ ಏರಿಕೆಯಾಗಿದೆ, ಕಳೆದ ಒಂದು ವಾರದಲ್ಲಿ ಲೀಟರ್‌ಗೆ 5.60 ರೂ. ಏರಿಕೆಯಾಗಿದೆ. ಮಾರ್ಚ್ 22 ರಂದು ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ದೀರ್ಘಾವಧಿಯ ವಿರಾಮದ ಅಂತ್ಯದ ನಂತರ ಬೆಲೆಗಳಲ್ಲಿ ಇದು ಒಂಬತ್ತನೇ ಹೆಚ್ಚಳವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...