alex Certify ಸತತ 5 ನೇ ಬಾರಿ ದರ ಏರಿಕೆ ನಂತರ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೊಸ ಗರಿಷ್ಠ ಮಟ್ಟಕ್ಕೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತತ 5 ನೇ ಬಾರಿ ದರ ಏರಿಕೆ ನಂತರ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೊಸ ಗರಿಷ್ಠ ಮಟ್ಟಕ್ಕೆ ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಂದು ಮತ್ತೆ ಹೆಚ್ಚಿಸಲಾಗಿದೆ. ಸತತ ಐದನೇ ಬಾರಿಗೆ ದರ ಏರಿಕೆ ಬಳಿಕ ಇಂಧನ ಬೆಲೆಗಳು ಹೊಸ ಗರಿಷ್ಠಕ್ಕೆ ತಲುಪಿವೆ.

ಇಂದು ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 35 ಪೈಸೆ ಹೆಚ್ಚಿಸಿವೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 109.34 ರೂ.ಗೆ ತಲುಪಿದೆ ಮತ್ತು ಡೀಸೆಲ್ ದರ ಲೀಟರ್‌ಗೆ 98.07 ರೂ.ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಕ್ರಮವಾಗಿ 115.15 ಮತ್ತು 106.23 ರೂ. ಆಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಡೀಸೆಲ್ ದರ ಕೋಲ್ಕತ್ತಾದಲ್ಲಿ 109.79 ರೂ. ಮತ್ತು 101.19 ರೂ. ಇದೆ.

ಮಧ್ಯಪ್ರದೇಶದ ಗಡಿ ಜಿಲ್ಲೆಯಲ್ಲಿ ಪೆಟ್ರೋಲ್ ದರ 121 ರೂಪಾಯಿ ಗಡಿ ದಾಟಿದೆ. ಕಳೆದ 37 ದಿನಗಳಲ್ಲಿ 29 ದಿನಗಳಲ್ಲಿ ಡೀಸೆಲ್ ಬೆಲೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್‌ಗೆ 9.55 ರೂ. ಜಾಸ್ತಿಯಾಗಿದೆ.

ಪೆಟ್ರೋಲ್ ಬೆಲೆಯು ಹಿಂದಿನ 33 ದಿನಗಳಲ್ಲಿ 26 ರಂದು ಏರಿಕೆಯಾಗಿದೆ, ಲೀಟರ್‌ಗೆ 8.15 ರೂ. ಹೆಚ್ಚಳವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...