alex Certify ವಾಹನ ಸವಾರರಿಗೆ ಮತ್ತೆ ಶಾಕ್: ಡೀಸೆಲ್ ದರ ಹೆಚ್ಚಳ, ಪೆಟ್ರೋಲ್ ಬೆಲೆ ಸ್ಥಿರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರಿಗೆ ಮತ್ತೆ ಶಾಕ್: ಡೀಸೆಲ್ ದರ ಹೆಚ್ಚಳ, ಪೆಟ್ರೋಲ್ ಬೆಲೆ ಸ್ಥಿರ

ನವದೆಹಲಿ: ಇಂದು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆ ಸ್ಥಿರವಾಗಿದೆ. ದೇಶದ ಅತಿದೊಡ್ಡ ಚಿಲ್ಲರೆ ಇಂಧನ ವ್ಯಾಪಾರಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್) ಪ್ರಕಾರ, ಇಂದು ಅಂದರೆ 26 ಸೆಪ್ಟೆಂಬರ್ ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 101.19 ರೂ. ಮತ್ತು ಡೀಸೆಲ್ ಬೆಲೆ 25 ಪೈಸೆ ಏರಿಕೆಯಾಗಿ ಪ್ರತಿ ಲೀಟರ್ ಗೆ 89.07 ರೂ. ದರ ಇದೆ.

ಸತತ 21 ದಿನಗಳವರೆಗೆ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲವಾಗಿದೆ. ದೇಶಾದ್ಯಂತ ಡೀಸೆಲ್ ಬೆಲೆಯನ್ನು 25 ರಿಂದ 27 ಪೈಸೆ ಹೆಚ್ಚಿಸಲಾಗಿದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ 107.26 ರೂ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 96.68 ರೂ. ಇದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 101.62 ರೂ., ಡೀಸೆಲ್ ಬೆಲೆ 92.17 ರೂ.

ಚೆನ್ನೈನಲ್ಲಿ ಪೆಟ್ರೋಲ್ 98.96 ರೂ. ಮತ್ತು ಡೀಸೆಲ್ 93.69 ರೂ. ಆಗಿದೆ.

ನೀವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು SMS ಮೂಲಕವೂ ತಿಳಿದುಕೊಳ್ಳಬಹುದು. ಇಂಡಿಯನ್ ಆಯಿಲ್ ವೆಬ್‌ಸೈಟ್ ಪ್ರಕಾರ, ನೀವು ಆರ್‌ಎಸ್‌ಪಿ ಮತ್ತು ನಿಮ್ಮ ನಗರ ಕೋಡ್ ಅನ್ನು ಬರೆದು 9224992249 ಸಂಖ್ಯೆಗೆ ಕಳುಹಿಸಬೇಕು. ಪ್ರತಿ ನಗರದ ಕೋಡ್ ವಿಭಿನ್ನವಾಗಿದೆ, ಅದನ್ನು ನೀವು ಐಒಸಿಎಲ್ ವೆಬ್‌ಸೈಟ್‌ನಿಂದ ಪಡೆಯಬಹುದು. https://iocl.com/Products/PetrolDieselPrices.aspx ದರ ಪರಿಶೀಲಿಸಬಹುದಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಬದಲಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...