alex Certify ವೀಗನ್​ ಮಿಲ್ಕ್​ಗೆ ಸ್ವಿಚ್​ ಆಗಿ ಎಂದ ಪೇಟಾಗೆ ಭರ್ಜರಿ ಟಾಂಗ್​ ನೀಡಿದ ಅಮುಲ್​ ಡೈರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೀಗನ್​ ಮಿಲ್ಕ್​ಗೆ ಸ್ವಿಚ್​ ಆಗಿ ಎಂದ ಪೇಟಾಗೆ ಭರ್ಜರಿ ಟಾಂಗ್​ ನೀಡಿದ ಅಮುಲ್​ ಡೈರಿ..!

ದೇಶದ ಬೃಹತ್​ ಡೈರಿ ಕಂಪನಿ ಅಮುಲ್​ ಹಾಗೂ ಪ್ರಾಣಿ ಹಿತರಕ್ಷಣಾ ವೇದಿಕೆ ಪೇಟಾ ನಡುವೆ ಸಣ್ಣ ವಿವಾದದ ಕಿಡಿಯೊಂದು ಹೊತ್ತಿಕೊಂಡಿದೆ. ಅಮುಲ್ ಡೈರಿಯ ಉತ್ಪನ್ನಗಳ ಬಗ್ಗೆ ಆಕ್ಷೇಪವನ್ನೆತ್ತಿದ್ದ ಪೇಟಾ, ಪ್ಲಾಂಟ್​ ಬೇಸ್ಡ್​ ಡೈರಿ ಪ್ರಾಡಕ್ಟ್​ನತ್ತ ಸ್ವಿಚ್​ ಆಗಬೇಕು ಎಂದು ಹೇಳಿತ್ತು. ಅಮುಲ್​ನ ಎಂಡಿ ಆರ್​, ಸೋಧಿಗೆ ಈ ಸಂಬಂಧ ಪತ್ರ ಬರೆದಿರುವ ಪೇಟಾ, ಈ ರೀತಿ ಪ್ಲಾಂಟ್​ ಬೇಸ್ಡ್​ ಡೈರಿ ಪ್ರಾಡಕ್ಟ್​ಗೆ ಬದಲಾಗುವಂತೆ ಹೇಳಿತ್ತು.

ಅಶ್ವಿನಿ ಮಹಾಜನ್​ರ ಟ್ವೀಟ್​ಗೆ ತುಸು ಖಾರವಾಗೇ ಪ್ರತಿಕ್ರಿಯಿಸಿದ ಆರ್​.ಎಸ್.​ ಸೋಧಿ, ಡೈರಿ ಉತ್ಪನ್ನಗಳನ್ನ ತಯಾರಿಸುವ ಎಷ್ಟೋ ರೈತರ ಬಳಿ ಸ್ವಂತ ಜಾಗ ಇರೋದಿಲ್ಲ. ನಿಮ್ಮ ಈ ಐಡಿಯಾದಿಂದ ಇವರ ಏಕೈಕ ಆದಾಯದ ಮೂಲ ಕೂಡ ಬಂದ್​ ಆಗಬಹುದು. ನೆನಪಿನಲ್ಲಿಡಿ ಹಾಲು ನಮ್ಮ ಸಂಪ್ರದಾಯ, ನಮ್ಮ ರುಚಿ ಹಾಗೂ ನಮ್ಮ ಆಹಾರವಾಗಿದೆ. ಅಲ್ಲದೇ ಹಾಲಿನಲ್ಲಿ ಅಗಾಧ ಪ್ರಮಾಣದ ಪೋಷಕಾಂಶ ಅಡಗಿದೆ ಎಂದು ಹೇಳಿದ್ದಾರೆ.

ಇನ್ನು ಪೇಟಾ ವೆಗಾನ್​ ಮಿಲ್ಕ್​​​ ಬಗ್ಗೆ ನೀಡಿದ್ದ ಅಭಿಪ್ರಾಯ ಸಂಬಂಧಿಸಿದ ಸುದ್ದಿಗೆ ಕೂಡ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ ಸೋಧಿ, 100 ಮಿಲಿಯನ್​ಗೂ ಅಧಿಕ ರೈತರ ಜೀವನ ಹಾಗೂ ಕಳೆದ 75 ವರ್ಷಗಳಲ್ಲಿ ರೈತರ ಹಣದಿಂದ ನಿರ್ಮಿಸಲಾದ ಈ ಸಂಪನ್ಮೂಲವನ್ನ ಪೇಟಾ ಮಧ್ಯಮ ವರ್ಗದ ಜನರು ಭರಿಸಲು ಸಾಧ್ಯವಾಗದ ಎಂಎನ್​ಸಿಯಾಗಿ ಮಾರ್ಪಾಡಿಸಲು ಹೊರಟಿದೆ ಎಂದು ಕುಟುಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...