alex Certify ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಪೇಟಿಎಂನಿಂದ ಪ್ರತಿ ವರ್ಗಾವಣೆಯಲ್ಲೂ ‘ಕ್ಯಾಶ್ ಬ್ಯಾಕ್’ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಪೇಟಿಎಂನಿಂದ ಪ್ರತಿ ವರ್ಗಾವಣೆಯಲ್ಲೂ ‘ಕ್ಯಾಶ್ ಬ್ಯಾಕ್’ ಸೌಲಭ್ಯ

ನವದೆಹಲಿ: ಪೇಟಿಎಂ ವತಿಯಿಂದ ಭಾರತೀಯ ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿದೆ. ಭಾರತದಲ್ಲಿ ಪೇಟಿಎಂ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದ್ದು, ಈ ಕ್ರೆಡಿಟ್ ಕಾರ್ಡ್ ಮೂಲಕ ಪ್ರತಿ ಖರೀದಿಯಲ್ಲೂ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.

ನೆಕ್ಸ್ಟ್ ಜನರೇಷನ್ ಕ್ರೆಡಿಟ್ ಕಾರ್ಡ್ ಇದಾಗಿದೆ ಎಂದು ಪೇಟಿಎಂ ತಿಳಿಸಿದ್ದು,  ಮುಂದಿನ 12-18 ತಿಂಗಳೊಳಗೆ 20 ಲಕ್ಷ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಕ್ರೆಡಿಟ್ ಕಾರ್ಡ್ ನೊಂದಿಗೆ ಅನೇಕ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಅಪ್ಲಿಕೇಷನ್ ಮೂಲಕ ಕ್ರೆಡಿಟ್ ಕಾರ್ಡ್ ಪಿನ್ ಬದಲಿಸಬಹುದು. ವಿಳಾಸ ನವೀಕರಿಸಬಹುದು. ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಬಹುದು.

ಕಾರ್ಡ್ ನಿಂದಾಗುವ ವಂಚನೆ ತಪ್ಪಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ವಿಮೆ ಸೌಲಭ್ಯವನ್ನು ನೀಡಲಾಗಿದೆ. ಕ್ಯಾಶ್ ಬ್ಯಾಕ್, ಗಿಫ್ಟ್ ವೋಚರ್ ರೂಪದಲ್ಲಿರುತ್ತದೆ. ಗ್ರಾಹಕರ ಹಿನ್ನಲೆ ಹಾಗೂ ಅವ್ರ ವಹಿವಾಟು, ಮಾರಾಟದ ವಿವರವನ್ನು ಪರಿಶೀಲಿಸಿ ನಂತ್ರ ಕ್ರೆಡಿಟ್ ಕಾರ್ಡ್ ನೀಡುತ್ತದೆ. ಅಪ್ಲಿಕೇಷನ್ ಪ್ರಕ್ರಿಯೆ ಆನ್ಲೈನ್ ಆಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...