alex Certify ಐಪಿಎಲ್ ವೇಳೆ ಪ್ರತಿ ಡಿಟಿಎಚ್ ರಿಚಾರ್ಜ್ ಗೆ ಸಿಗಲಿದೆ 200 ರೂ. ಕ್ಯಾಶ್ಬ್ಯಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ವೇಳೆ ಪ್ರತಿ ಡಿಟಿಎಚ್ ರಿಚಾರ್ಜ್ ಗೆ ಸಿಗಲಿದೆ 200 ರೂ. ಕ್ಯಾಶ್ಬ್ಯಾಕ್

ದೇಶದ ಪ್ರಮುಖ ಡಿಜಿಟಲ್ ಫೈನಾನ್ಷಿಯಲ್ ಸರ್ವೀಸಸ್ ಪ್ಲಾಟ್‌ಫಾರ್ಮ್ ಪೇಟಿಎಂ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ಸುದ್ದಿ ನೀಡಿದೆ. ಐಪಿಎಲ್ ಸಂದರ್ಭದಲ್ಲಿ ಡಿಟಿಎಚ್ ರೀಚಾರ್ಜ್‌ಗೆ ಆಕರ್ಷಕ ಕ್ಯಾಶ್‌ಬ್ಯಾಕ್ ಘೋಷಣೆ ಮಾಡಿದೆ. ಪೇಟಿಎಂ ಇದಕ್ಕೆ 2 ಪೇ 200 ಕ್ಯಾಶ್‌ಬ್ಯಾಕ್ ಎಂದು ಹೆಸರಿಟ್ಟಿದೆ.

ಐಪಿಎಲ್‌ನ ಎರಡು ತಿಂಗಳ ಅವಧಿಯಲ್ಲಿ ಬಳಕೆದಾರರು ಡಿಟಿಎಚ್ ರೀಚಾರ್ಜ್‌ ಮಾಡಿದ್ರೆ ಭರ್ಜರಿ ಕ್ಯಾಶ್‌ಬ್ಯಾಕ್ ಸಿಗಲಿದೆ. 2 ಪೇ 200 ಕ್ಯಾಶ್‌ಬ್ಯಾಕ್’ ಆಫರ್ ಪಡೆಯಲು ಹೊಸ ಬಳಕೆದಾರರು ಸತತ ಎರಡು ತಿಂಗಳಲ್ಲಿ 100 ರೂಪಾಯಿಗಳವರೆಗೆ ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ಏರ್ಟೆಲ್ ಡಿಜಿಟಲ್ ಟಿವಿ, ಟಾಟಾ ಸ್ಕೈ, ಡಿಶ್ ಟಿವಿ, ವಿಡಿಯೋಕಾನ್ ಡಿ 2 ಹೆಚ್ ಮತ್ತು ಸನ್ ಡೈರೆಕ್ಟ್ ಎಲ್ಲಾ ಪ್ರಿಪೇಯ್ಡ್ ಯೋಜನೆಗೆ ರಿಚಾರ್ಜ್ ಮಾಡಿದ್ರೆ ಈ ಕ್ಯಾಶ್ಬ್ಯಾಕ್ ಸಿಗಲಿದೆ.

ಪೇಟಿಎಂ ತನ್ನ ಗ್ರಾಹಕರಿಗೆ ಪೇಟಿಎಂ ಯುಪಿಐ, ಪೇಟಿಎಂ ವಾಲೆಟ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮೋಡ್ ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಬಳಕೆದಾರರು ಪೋಸ್ಟ್ ಪೇಯ್ಡ್ ವೈಶಿಷ್ಟ್ಯದ ಲಾಭವನ್ನು ಸಹ ಪಡೆಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...