alex Certify ಗಮನಿಸಿ…! ಆಧಾರ್ – ಪಾನ್ ಕಾರ್ಡ್ ಜೋಡಣೆಗೆ ಮಾರ್ಚ್ 31 ಕೊನೆ ದಿನ – ಲಿಂಕ್ ಮಾಡಲು ಇಲ್ಲಿದೆ ಸುಲಭ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ…! ಆಧಾರ್ – ಪಾನ್ ಕಾರ್ಡ್ ಜೋಡಣೆಗೆ ಮಾರ್ಚ್ 31 ಕೊನೆ ದಿನ – ಲಿಂಕ್ ಮಾಡಲು ಇಲ್ಲಿದೆ ಸುಲಭ ವಿಧಾನ

ಆಧಾರ್ ಕಾರ್ಡ್​ನೊಂದಿಗೆ ಪಾನ್​ ಕಾರ್ಡ್​ ಲಿಂಕ್​ ಮಾಡುವ ಗಡುವನ್ನ ವಿಸ್ತರಿಸಲು ಕೇಂದ್ರ ನೇರ ತೆರಿಗೆ ಮಂಡಳಿ ಜೂನ್​ನಲ್ಲಿ ಅಧಿಸೂಚನೆ ಹೊರಡಿಸಿತ್ತು.

ಪ್ಯಾನ್​ -ಆಧಾರ್​ ಲಿಂಕ್​ ಮಾಡುವ ದಿನಾಂಕವನ್ನ ಮಾರ್ಚ್​ 31, 2021ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಪಾನ್​​ ಕಾರ್ಡ್​ನ್ನ ಆಧಾರ್​ ಕಾರ್ಡ್​ಗೆ ಲಿಂಕ್​ ಮಾಡಲು ಜೂನ್​ 30, 2020ರವರೆಗೆ ಗಡುವು ನೀಡಲಾಗಿತ್ತು. ನೀವು ಪಾನ್​ನೊಂದಿಗೆ ಆಧಾರ್​ ಕಾರ್ಡ್ ಲಿಂಕ್​ ಮಾಡದೇ ಇದ್ದರೆ, ಈ ಪ್ರಕ್ರಿಯೆಯನ್ನ ನೀವು ಆನ್​ಲೈನ್​ನಲ್ಲೇ ಮಾಡಬಹುದಾಗಿದೆ.

ಪ್ಯಾನ್​ ಹಾಗೂ ಆಧಾರ್​ ಕಾರ್ಡ್​ಗಳನ್ನ ಲಿಂಕ್​ ಮಾಡುವ ಮೊದಲು ತೆರಿಗೆ ಪಾವತಿದಾರರು ತೆರಿಗೆ ಇ ಫೈಲಿಂಗ್​ ಪೋರ್ಟಲ್​​ನಲ್ಲಿ ನೋಂದಾಯಿಸಿಕೊಳ್ಳಬೇಕು. ಲಾಗ್​ ಇನ್​ ಐಡಿ, ಪಾಸ್​ವರ್ಡ್ ಹಾಗೂ ಹುಟ್ಟಿದ ದಿನಾಂಕವನ್ನ ನಮೂದಿಸುವ ಮೂಲಕ ಆದಾಯ ತೆರಿಗೆ ಇಲಾಖೆಯ ಇ ಫೈಲಿಂಗ್​​ ಪೋರ್ಟಲ್​​ಗೆ ಲಾಗ್​ ಇನ್​ ಮಾಡಿ.

ಈ ಎಲ್ಲ ವಿವರಗಳನ್ನ ನೀಡಿದ ಬಳಿಕ ನಿಮಗೆ ಕೋಡ್​​ ಒಂದು ಸಿಗಲಿದೆ. ಈ ಸೈಟ್​ಗೆ ಲಾಗಿನ್​ ಆಗುವ ವೇಳೆ ನಿಮಗೆ ಪಾಪ್​ಅಪ್​ ವಿಂಡೋ ಕಾಣಿಸುತ್ತೆ. ನಿಮ್ಮ ಪಾನ್​ ಕಾರ್ಡ್​ನ್ನು ಆಧಾರ್​ನೊಂದಿಗೆ ಲಿಂಕ್​ ಮಾಡಲು ಕೇಳುತ್ತದೆ. ಇಲ್ಲವಾದಲ್ಲಿ ನೀವು ಫ್ರೊಫೈಲ್​ ಸೆಟ್ಟಿಂಗ್​​ಗೆ ಹೋಗಿ ಲಿಂಕ್​ ಆಧಾರ್​ ಬಟನ್​ ಆಯ್ಕೆ ಮಾಡಬಹುದಾಗಿದೆ.

ಆಧಾರ್​ ಕಾರ್ಡ್​ನಲ್ಲಿ ನಮೂದಿಸಿರುವ ವಿವರಗಳೊಂದಿಗೆ ಪರದೆಯ ಮೇಲಿರುವ ವಿವರಗಳನ್ನ ಪರಿಶೀಲನೆ ಮಾಡಿ. ವಿವರಗಳು ಹೊಂದಿಕೆಯಾದ ಬಳಿಕ ಆಧಾರ್​ ಕಾರ್ಡ್​ ಸಂಖ್ಯೆ ನಮೂದಿಸಿ ಹಾಗೂ ಲಿಂಕ್​ ಬಟನ್​ ಕ್ಲಿಕ್​ ಮಾಡಿ.

ನಿಮ್ಮ ಆಧಾರ್​ ಕಾರ್ಡ್​ನ್ನು ಪಾನ್​ ಕಾರ್ಡ್​ಗೆ ಯಶಸ್ವಿಯಾಗಿ ಲಿಂಕ್​ ಮಾಡಲಾಗಿದೆ ಎಂಬ ಸಂದೇಶವನ್ನ ನೀವು ಪಡೆಯುತ್ತೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...