alex Certify BIG NEWS 8 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಿದ ಮಿಶೋ, ಓಲಾ, ವೇದಾಂತು, ಅನ್ ಆಕಾಡೆಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS 8 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಿದ ಮಿಶೋ, ಓಲಾ, ವೇದಾಂತು, ಅನ್ ಆಕಾಡೆಮಿ

ನವದೆಹಲಿ: ಭಾರತದಲ್ಲಿ 8000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮೀಶೋ, ಓಲಾ, ಅನ್ ಅಕಾಡೆಮಿ ಮತ್ತು ಇತರ ಸ್ಟಾರ್ಟ್‌ ಅಪ್‌ ಗಳು ವಜಾಗೊಳಿಸಿವೆ.

ಸಾಮಾನ್ಯವಾಗಿ ಸ್ಟಾರ್ಟ್‌ ಅಪ್‌ ಗಳು ಲಾಭದಾಯಕ ಕೊಡುಗೆ ನೀಡುತ್ತವೆ. ಉದ್ಯೋಗಾಕಾಂಕ್ಷಿಗಳು ಬೇಡವೆಂದು ಹೇಳಲು ಕಷ್ಟವಾಗುತ್ತದೆ, ಆದರೆ, ಇತ್ತೀಚೆಗೆ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಸ್ಟಾರ್ಟ್‌ ಅಪ್‌ ಗಳು ಭಯಪಡುವ ಸ್ಥಳವಾಗಿವೆ. ಅನ್ ಅಕಾಡೆಮಿ, ಕಾರ್ಸ್ 24, ವೇದಾಂತು, ಮೀಶೋ, ಟ್ರೆಲ್, ಫರ್ಲೆಂಕೊ ಸೇರಿದಂತೆ ಭಾರತದಲ್ಲಿನ ಕೆಲವು ಜನಪ್ರಿಯ ಸ್ಟಾರ್ಟ್ ಅಪ್‌ ಗಳು 5000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ತೊರೆದಿವೆ. ಇದು ಅಂತ್ಯವಲ್ಲ, ಭಾರತದಲ್ಲಿನ ಸ್ಟಾರ್ಟ್ ಅಪ್ ಉದ್ಯಮದಾದ್ಯಂತ ಇಂತಹ ಬೆಳವಣಿಗೆ ಮುಂದುವರೆಯಲಿವೆ. ಕಂಪನಿಗಳಿಂದ ವಜಾಗೊಳಿಸಿದ ಹೆಚ್ಚಿನ ಉದ್ಯೋಗಿಗಳು ಯಾವುದೇ ಮುನ್ಸೂಚನೆಯಿಲ್ಲದೆ ತಮ್ಮನ್ನು ಕೆಲಸ ತೊರೆಯುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಉದ್ಯೋಗಿಗಳ ಸಾಮೂಹಿಕ ವಜಾದ ಹಿಂದಿನ ಕಾರಣ ತಿಳಿದಿಲ್ಲ, ಆದರೆ, ಉದ್ಯೋಗಿಗಳನ್ನು ವಜಾಗೊಳಿಸುವ ಎಲ್ಲಾ ಕಂಪನಿಗಳಲ್ಲಿ ವೆಚ್ಚ ಕಡಿತವೇ ಸಾಮಾನ್ಯ ಕಾರಣವಾಗಿದೆ. ಫಂಡಿಂಗ್ ನಿಧಾನವಾಗಿರುವುದು ಮತ್ತು ಹೂಡಿಕೆದಾರರ ಒತ್ತಡ ನಿಭಾಯಿಸಲು ಸ್ಟಾರ್ಟ್‌ ಅಪ್‌ ಗಳಿಗೆ ಸಾಧ್ಯವಾಗದಿರುವುದು ಕೂಡ ಇದಕ್ಕೆ ಕಾರಣ.

ಓಲಾ 2022 ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 2100 ಉದ್ಯೋಗಿಗಳನ್ನು ವಜಾಗೊಳಿಸಿದೆ. 926 ಉದ್ಯೋಗಿಗಳನ್ನು ಅನ್ ಅಕಾಡೆಮಿ ವಜಾ ಮಾಡಿದ್ದು, ವೇದಾಂಟು 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಾರ್ಸ್ 24 ಸುಮಾರು 600 ಉದ್ಯೋಗಿಗಳನ್ನು ಕೈಬಿಟ್ಟಿದೆ. ಹೊಸದಾಗಿ ಸ್ಥಾಪಿಸಲಾದ ಮಿಶೋ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಸುಮಾರು 150 ಉದ್ಯೋಗಿಗಳನ್ನು ಕೈಬಿಟ್ಟಿದೆ.

424 ಉದ್ಯೋಗಿಗಳನ್ನು ವಜಾಗೊಳಿಸಿದ ವೇದಾಂತು

ಒಟ್ಟು 5900 ಉದ್ಯೋಗಿಗಳನ್ನು ಹೊಂದಿರುವ ಜನಪ್ರಿಯ ಎಜು-ಟೆಕ್ ಕಂಪನಿ ವೇದಾಂತು ಸುಮಾರು 7 ಪ್ರತಿಶತದಷ್ಟು ಉದ್ಯೋಗಿಗಳಿಗೆ ಕೆಲಸ ತೊರೆಯಲು ಕೇಳಿಕೊಂಡಿದೆ. ಹಾಗಾಗಿ, 5900 ರಲ್ಲಿ 424 ನೌಕರರು ಪಿಂಕ್ ಸ್ಲಿಪ್ ಪಡೆಯಲಿದ್ದಾರೆ. ಕಂಪನಿಯ ಸಿಇಒ ವಂಶಿಕೃಷ್ಣ ಅವರು ಉದ್ಯೋಗಿಗಳಿಗೆ ವಜಾಗೊಳಿಸುವ ಬಗ್ಗೆ ಮಾಹಿತಿ ನೀಡಿದ್ದರು.

ಕೃಷ್ಣ ಅವರು, 5900 ಉದ್ಯೋಗಿಗಳಲ್ಲಿ 424 ಜನ ಅಂದರೆ ಕಂಪನಿಯ ಶೇ. 7 ರಷ್ಟು ಮಂದಿ ನಮ್ಮಿಂದ ಬೇರ್ಪಡುತ್ತಾರೆ ಎಂದು ಹೇಳಿದ್ದಾರೆ. ಇದು ಅತ್ಯಂತ ಕಷ್ಟಕರವಾದ ಕರೆಯಾಗಿದೆ. ಈ ನಿರ್ಧಾರ ಏಕೆ ತೆಗೆದುಕೊಳ್ಳಬೇಕೆಂಬುದನ್ನು ಪ್ರತಿಯೊಬ್ಬ ಉದ್ಯೋಗಿ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಮೊದಲ ಸುತ್ತಿನಲ್ಲಿ ವೇದಾಂತು 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಎರಡನೇ ಸುತ್ತಿನಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ 424 ಕ್ಕೆ ಏರಿದೆ.

100 ಮಿಲಿಯನ್ ಬಳಕೆದಾರರಿದ್ದರೂ 150 ಉದ್ಯೋಗಿಗಳ ಕೈಬಿಟ್ಟ ಮಿಶೋ

ಇ-ಕಾಮರ್ಸ್ ಪ್ಲಾಟ್‌ ಫಾರ್ಮ್ ಮಿಶೋ ಭಾರತದಲ್ಲಿ ಕೆಲವೇ ತಿಂಗಳುಗಳಲ್ಲಿ ಹೆಚ್ಚು ಜನಪ್ರಿಯವಾಯಿತು, ಇತ್ತೀಚೆಗೆ 100 ಮಿಲಿಯನ್ ಬಳಕೆದಾರರನ್ನು ಕೂಡ ಅದು ಗಳಿಸಿ 6 ಲಕ್ಷ ಸೇಲ್ ಬೇಸ್ ನೋಂದಾಯಿಸಿದೆ. ಇಷ್ಟೆಲ್ಲಾ ಯಶಸ್ಸಿನ ಹೊರತಾಗಿಯೂ, ಮಿಶೋ ಸುಮಾರು 150 ಉದ್ಯೋಗಿಗಳನ್ನು ವಜಾಗೊಳಿಸಿದೆ. ಪುನಾರಚನೆ ಕಾರಣವನ್ನು ಉಲ್ಲೇಖಿಸಿ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಕಂಪನಿಯಿಂದ ಪ್ಯಾಕೇಜ್‌ ಗಳು ಮತ್ತು ಔಟ್‌ ಪ್ಲೇಸ್‌ ಮೆಂಟ್ ಸಹಾಯ ನೀಡಲಾಗುತ್ತದೆ. ಇದರಿಂದ ಮಾರುಕಟ್ಟೆ ವ್ಯಾಪಾರದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ, ಮತ್ತಷ್ಟು ಪ್ರತಿಭಾವಂತರನ್ನು ನೇಮಿಸಿಕೊಳ್ಳುತ್ತೇವೆ. ಇದರೊಂದಿಗೆ ಬೆಳೆಯುತ್ತೇವೆ ಎಂದು ಕಂಪನಿಯು ಅಧಿಕೃತ ಬ್ಲಾಗ್ ಪೋಸ್ಟ್‌ ನಲ್ಲಿ ತಿಳಿಸಿದೆ.

ಕೆಲಸ ಕಳೆದುಕೊಂಡ ಕಾರ್ಸ್ 24 ಉದ್ಯೋಗಿಗಳು

600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಬಳಸಿದ ಕಾರ್ ಮಾರುಕಟ್ಟೆಯಾದ ಕಾರ್ಸ್ 24 ಮೇ ತಿಂಗಳಲ್ಲಿ ಶೇ. 6 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪನಿಯು ಉದ್ಯೋಗಿಗಳನ್ನು ತೆಗೆದುಹಾಕುವುದರ ಹಿಂದಿನ ನಿಖರವಾದ ಕಾರಣವನ್ನು ಬಹಿರಂಗಪಡಿಸಲಿಲ್ಲ. ಆದರೆ ಇದು ಪ್ರತಿ ವರ್ಷ ನಡೆಯುವ ಸಾಮಾನ್ಯ ಕಾರ್ಯಕ್ಷಮತೆ ಆಧರಿತ ನಿರ್ಗಮನವಾಗಿದೆ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...