ರಾಯಪುರದ ರೆಸ್ಟಾರೆಂಟ್ವೊಂದು ತನ್ನ ಹೆಸರಿನ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಬೀಗರ ಮನೆಯ ಊಟದ ಮಾದರಿ ಎಂದು ಈ ರೆಸ್ಟಾರೆಂಟ್ ಮುಂದೆ ಬೋರ್ಡ್ ಹಾಕಲಾಗಿದೆ.
ಪ್ರಿಯಾಂಕಾ ಶುಕ್ಲಾ ಎಂಬವರು ಟ್ವಿಟರ್ನಲ್ಲಿ ಈ ರೆಸ್ಟಾರೆಂಟ್ನ ಫೋಟೋ ಶೇರ್ ಮಾಡಿದ್ದು, ಅನೇಕ ಕಡೆ ಮನೆ ಊಟ ಎಂದು ಬರೆದಿದ್ದನ್ನ ನೋಡಿದ್ದೇನೆ ಕೇಳಿದ್ದೇನೆ. ಆದರೆ ಬೀಗರ ಮನೆಯ ಊಟ ಎಂದು ಇದೇ ಮೊದಲ ಬಾರಿಗೆ ನೋಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಶ್ರೀ ಸುರುಚಿ ಹೆಸರಿನ ರೆಸ್ಟಾರೆಂಟ್ ಬೀಗರ ಮನೆ ಊಟ ಎಂಬ ಟ್ಯಾಗ್ಲೈನ್ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಮೆಂಟ್ ಸೆಕ್ಷನ್ನಲ್ಲಂತೂ ಜನರು ಹೋಟೆಲ್ಗೆ ಬಂದವರೆಲ್ಲರನ್ನೂ ಅಳಿಯನಂತೆ ನೋಡಿಕೊಳ್ತೀರಾ ಎಂದು ಪ್ರಶ್ನೆ ಮಾಡ್ತಿದ್ದಾರೆ. ಇನ್ನು ಕೆಲವರು ಇದು ಹುಡುಗಿಯ ಬೀಗರ ಮನೆಯೋ ಹುಡುಗನದ್ದೋ ಎಂದೂ ಕೇಳಿದ್ದಾರೆ.