alex Certify ʼವಾಟ್ಸಾಪ್ʼ‌ ಖಾಸಗಿತನದ ನೀತಿ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾಟ್ಸಾಪ್ʼ‌ ಖಾಸಗಿತನದ ನೀತಿ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ತನ್ನ ಬಹುನಿರೀಕ್ಷಿತ ಖಾಸಗಿತನದ ನೀತಿಗಳ ಬಗೆಗಿನ ಪ್ಲಾನ್‌ಗಳ ಕುರಿತಾಗಿ ಹೇಳಿಕೊಂಡಿರುವ ವಾಟ್ಸಾಪ್, ತನ್ನ ಈ ನೀತಿಯನ್ನು ಪರಿಷ್ಕರಿಸುವುದಾಗಿ ಸ್ಪಷ್ಟವಾಗಿ ತಿಳಿಸಿದೆ.

ಜನವರಿಯಲ್ಲಿ ಖಾಸಗಿತನ ಸಂಬಂಧ ಹೊಸ ನೀತಿಗಳನ್ನು ಜಾರಿಗೆ ತರುವುದಾಗಿ ಹೇಳಿಕೊಂಡಿದ್ದ ವಾಟ್ಸಾಪ್‌, ಈ ಬಗ್ಗೆ ತನ್ನ ಬಳಕೆದಾರರ ಅಸಮಾಧಾನಗಳು ಕೇಳಿ ಬಂದ ಬಳಿಕ ತನ್ನ ನಡೆಯನ್ನು ಮೇ 15ಕ್ಕೆ ಮುಂದೂಡಿತ್ತು.

ಇದೀಗ ಕೆಲವೊಂದು ಹೊಸ ಫೀಚರ್‌ಗಳನ್ನು ಸೇರಿಸುವ ಮೂಲಕ ಖಾಸಗಿತನ ಸಂಬಂಧ ಹೊಸ ನೀತಿಗಳಲ್ಲಿ ಕುರಿತಂತೆ ಬಳಕೆದಾರರು ಇನ್ನಷ್ಟು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ವಾಟ್ಸಾಪ್ ಹೇಳುತ್ತಿದೆ. ಈ ಸಂಬಂಧ ಕೆಲವೊಂದು ಪ್ರಮುಖಾಂಶಗಳು:

1. ವಾಟ್ಸಾಪ್‌ ಮುಖಾಂತರ ಬ್ಯುಸಿನೆಸ್‌‌ಗಳೊಂದಿಗೆ ಚಾಟಿಂಗ್ ಅಥವಾ ಶಾಪಿಂಗ್‌ ಮಾಡುವ ಆಯ್ಕೆ ಕೊಡಮಾಡಲು ವಾಟ್ಸಾಪ್‌‌ ಮುಂದಾಗಿದೆ. ಈ ಸಂಬಂಧದ ವೈಯಕ್ತಿಕ ಸಂದೇಶಗಳು ತುದಿಯಿಂದ-ತುದಿಗೆ ಎನ್‌ಕ್ರಿಪ್ಟ್‌ ಆಗಿರಲಿದ್ದು, ಖುದ್ದು ವಾಟ್ಸಾಪ್ ಸಹ ಓದಲು ಸಾಧ್ಯವಿಲ್ಲ.

2. ತನ್ನ ಸ್ಟೇಟಸ್‌ ಫೀಚರ್‌ ಮುಖಾಂತರ ವಾಟ್ಸಾಪ್‌ ತನ್ನ ಮೌಲ್ಯಗಳು ಹಾಗೂ ಅಪ್ಡೇಟ್‌ಗಳ ಸಂಬಂಧ ಬಳಕೆದಾರರಿಗೆ ನೇರವಾಗಿ ಮಾಹಿತಿ ರವಾನೆ ಮಾಡುತ್ತಿದೆ.

ಸರ್ಕಾರಿ ನೌಕರರಿಗೆ ಕಡ್ಡಾಯವಾಗಲಿದೆ ಎಲೆಕ್ಟ್ರಿಕ್‌ ವಾಹನ…!

3. ಮುಂಬರುವ ವಾರಗಳಲ್ಲಿ ವಾಟ್ಸಾಪ್‌ನಲ್ಲಿ ಬ್ಯಾನರ್‌ ಒಂದರ ಮೂಲಕ ಜನರಿಗೆ ಹೆಚ್ಚಿನ ಮಾಹಿತಿಗಳನ್ನು ತಮ್ಮದೇ ವೇಗದಲ್ಲಿ ಓದಿ ಅರ್ಥೈಸಿಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ.

4. ಬಳಕೆದಾರರು ಕಳಕಳಿ ವ್ಯಕ್ತಪಡಿಸುತ್ತಿರುವ ವಿಚಾರಗಳಲ್ಲಿ ಸುಧಾರಣೆ ತರಲು ತಾನು ಏನೆಲ್ಲಾ ಮಾಡುತ್ತಿರುವೆ ಎಂದು ವಾಟ್ಸಾಪ್ ಈ ಬ್ಯಾನರ್‌ಗಳ ಮೂಲಕ ಹೇಳಲು ಇಚ್ಛಿಸುತ್ತದೆ. ಬರುಬರುತ್ತಾ, ತನ್ನ ನೀತಿಗಳನ್ನು ಓದಿ, ಒಪ್ಪಿಗೆ ಸೂಚಿಸಿದಲ್ಲಿ ಮಾತ್ರವೇ ವಾಟ್ಸಾಪ್‌ ಸೇವೆಗಳನ್ನು ಮುಂದುವರೆಸಲು ಸಾಧ್ಯ ಎಂದು ಇನ್‌ಸ್ಟಂಟ್‌ ಸಂದೇಶಗಳ ಸೇವಾದಾರ ತನ್ನ ಬಳಕೆದಾರರಿಗೆ ಅಲರ್ಟ್ ಮಾಡುತ್ತಲೇ ಇರುತ್ತದೆ.

5. ವೈಯಕ್ತಿಕ ಬಳಕೆದಾರರಿಗೆ ತನ್ನ ಸೇವೆಗಳನ್ನು ಉಚಿತವಾಗಿ ಕೊಡುವುದನ್ನು ಮುಂದುವರೆಸಲು, ಬ್ಯುಸಿನೆಸ್ ಖಾತೆಗಳನ್ನು ಇಟ್ಟುಕೊಳ್ಳುವವರಿಗೆ ಶುಲ್ಕ ವಿಧಿಸುವುದಾಗಿ ವಾಟ್ಸಾಪ್ ಹೇಳಿಕೊಳ್ಳುತ್ತಿದೆ.

6. ಫೇಸ್ಬುಕ್‌ ಜೊತೆಗೆ ಡೇಟಾ ಹಂಚಿಕೊಳ್ಳುವ ಸಂಬಂಧ ಇದ್ದ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಟ್ಟಿರುವ ವಾಟ್ಸಾಪ್, ಕೆಲವೊಂದು ಶಾಪಿಂಗ್ ಫೀಚರ್‌ಗಳನ್ನು ಪೇಸ್ಬುಕ್‌ನೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದೆ. ಈ ಮೂಲಕ ಒಂದೇ ನಿರ್ವಹಣೆಯ ಅಡಿ ಇರುವ ಎಲ್ಲಾ ಕಿರುತಂತ್ರಾಂಶಗಳೂ ಸಾಮಾನ್ಯ ಫೀಚರ್‌ಗಳನ್ನು ಬಳಸುವಂತಾಗುವ ಉದ್ದೇಶ ಇದೆ.

7. ಮುಂದಿನ ದಿನಗಳಲ್ಲಿ, ಹೆಚ್ಚಿನ ಮಾಹಿತಿಗಳನ್ನು ವಾಟ್ಸಾಪ್ ನೇರವಾಗಿ ಅಪ್ಲಿಕೇಶನ್‌ನಲ್ಲೇ ಬಿತ್ತರಿಸಲಿದ್ದು, ತಮಗೆ ಬೇಕಾದ ಬ್ಯುಸಿನೆಸ್ ಜೊತೆಗೆ ಎಂಗೇಜ್ ಆಗುವುದು ಅಥವಾ ಬೇಡ ಎನ್ನುವುದನ್ನು ಬಳಕೆದಾರರೇ ನಿರ್ಧರಿಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...