alex Certify BIG NEWS: ಸರ್ಕಾರಿ ನೌಕರರಿಗೆ ಕಡ್ಡಾಯವಾಗಲಿದೆ ಎಲೆಕ್ಟ್ರಿಕ್‌ ವಾಹನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸರ್ಕಾರಿ ನೌಕರರಿಗೆ ಕಡ್ಡಾಯವಾಗಲಿದೆ ಎಲೆಕ್ಟ್ರಿಕ್‌ ವಾಹನ…!

ದೇಶದಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆಯನ್ನ ಉತ್ತೇಜಿಸಲು ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದ್ಯಾ ಎಂಬ ಪ್ರಶ್ನೆ ಎದುರಾಗಿದೆ.

ಶೀಘ್ರದಲ್ಲೇ ಎಲ್ಲಾ ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್​ ವಾಹನಗಳನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಈ ಸಂಬಂಧ ಕೇಂದ್ರ ಸಚಿವ ನಿತಿನ್​ ಗಡ್ಕರಿ ಸುಳಿವನ್ನ ನೀಡಿದ್ದಾರೆ.

ಅಲ್ಲದೇ ಸರ್ಕಾರ ಎಲೆಕ್ಟ್ರಿಕ್​ ಅಡುಗೆ ಸಾಧನಗಳ ಖರೀದಿಯಲ್ಲೂ ಸಬ್ಸಿಡಿ ನೀಡುವಂತಾಗಬೇಕು. ಇದರಿಂದ ಎಲ್​ಪಿಜಿ ಸಿಲಿಂಡರ್​ ಬಳಕೆ ಕಡಿಮೆಯಾಗಲಿದೆ ಎಂದು ಗಡ್ಕರಿ ಸಲಹೆ ನೀಡಿದ್ದಾರೆ.

ಗೋ ಎಲೆಕ್ಟ್ರಿಕ್​ ಕ್ಯಾಂಪೇನ್​ ಉದ್ದೇಶಿಸಿ ಮಾತನಾಡಿದ ಅವ್ರು, ನಾವೇಕೆ ಎಲೆಕ್ಟ್ರಿಕ್​ ಅಡುಗೆ ಸಾಮಗ್ರಿಗಳ ಮೇಲೂ ಸಬ್ಸಿಡಿ ನೀಡಬಾರದು..? ಈಗಾಗಲೇ ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡುತ್ತಿದ್ದೇವೆ. ಅದೇ ರೀತಿ ಎಲೆಕ್ಟ್ರಿಕ್​ ಅಡುಗೆ ಒಲೆಗಳಿಗೂ ಸಬ್ಸಿಡಿ ನೀಡಿದ್ರೆ ಎಲ್​ಪಿಜಿ ಬಳಕೆ ಕಡಿಮೆಯಾಗಲಿದೆ ಎಂದು ಹೇಳಿದ್ರು.

ಅಲ್ಲದೇ ಎಲೆಕ್ಟ್ರಿಕ್​ ವಾಹನಗಳನ್ನ ಸರ್ಕಾರಿ ಕಛೇರಿಗಳ ಬಳಕೆಗೆ ಹಾಗೂ ನೌಕರರಿಗೆ ಕಡ್ಡಾಯಗೊಳಿಸಬೇಕು ಎಂದೂ ಇದೇ ಸಮಯದಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ದೆಹಲಿಯಲ್ಲಿ ಬಳಕೆಯಲ್ಲಿರುವ 10 ಸಾವಿರ ಎಲೆಕ್ಟ್ರಿಕ್​ ವಾಹನಗಳಿಂದಾಗಿ ಪ್ರತಿ ತಿಂಗಳಿಗೆ 30 ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ ಎಂದು ಇದೇ ಸಮಯದಲ್ಲಿ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...