alex Certify ಗಮನಿಸಿ: ಜನವರಿ 1ರಿಂದ ಆಗಲಿದೆ ಈ 10 ಮುಖ್ಯ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಜನವರಿ 1ರಿಂದ ಆಗಲಿದೆ ಈ 10 ಮುಖ್ಯ ಬದಲಾವಣೆ

ಹೊಸ ವರ್ಷಕ್ಕೆ ಕಾಲಿಡೋಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಹೊಸ ವರ್ಷದ ಜೊತೆಗೆ ಹೊಸ ರೂಲ್ಸ್ ಹೊಸ ಸೌಲಭ್ಯ ಕೂಡ ನಾಳೆಯಿಂದ ನಮ್ಮದಾಗಲಿದೆ. ಫಾಸ್ಟ್​ಟ್ಯಾಗ್​ ಕಡ್ಡಾಯ, ಪಾಸಿಟಿವ್​ ಪೇ ವ್ಯವಸ್ಥೆ ಸೇರಿದಂತೆ ಅನೇಕ ನಿಯಮಗಳು ನಾಳೆಯಿಂದ ಜಾರಿಯಾಗಲಿವೆ.

1. ಚೆಕ್​ಗಳಿಗೆ ಪಾಸಿಟಿವ್​ ಪೇ ವ್ಯವಸ್ಥೆ: ಭಾರತೀಯ ರಿಸರ್ವ್​ ಬ್ಯಾಂಕ್​​ ನಾಳೆಯಿಂದ ಪಾಸಿಟಿವ್​ ಪೇ ಸಿಸ್ಟಮ್​​ನ್ನ ಬ್ಯಾಂಕ್​ಗಳಲ್ಲಿ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದೆ. ಈ ವ್ಯವಸ್ಥೆಯಡಿಯಲ್ಲಿ 50 ಸಾವಿರಕ್ಕೂ ಹೆಚ್ಚು ರೂಪಾಯಿಗಳ ಚೆಕ್​ ವ್ಯವಹಾರ ನಡೆಸುವ ಗ್ರಾಹಕರು ಬ್ಯಾಂಕ್​ಗೆ ಹೆಚ್ಚಿನ ದಾಖಲೆಗಳನ್ನ ಸಲ್ಲಿಸಬೇಕಾಗುತ್ತೆ.

2. ಸಂಪರ್ಕ ರಹಿತ ಕಾರ್ಡ್​ ವ್ಯವಹಾರದ ಮಿತಿ ಏರಿಕೆ: ಈವರೆಗೆ 2000 ರೂಪಾಯಿ ಹೊಂದಿದ್ದ ಸಂಪರ್ಕ ರಹಿತ ಕಾರ್ಡ್​ ವಹಿವಾಟಿನ ಮಿತಿಯನ್ನ ಆರ್​ಬಿಐ ನಾಳೆಯಿಂದ 5 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಲಿದೆ. ಡಿಜಿಟಲ್​ ಪೇಮೆಂಟ್​ಗೆ ಹೆಚ್ಚಿನ ಒತ್ತನ್ನ ನೀಡುವ ಸಲುವಾಗಿ ಆರ್​ಬಿಐ ಈ ಕ್ರಮ ಕೈಗೊಂಡಿದೆ.

3. ಯುಪಿಐ ವ್ಯವಹಾರಕ್ಕೆ ಹೆಚ್ಚುವರಿ ಶುಲ್ಕ: ಯುನಿಫೈಡ್​ ಪೇಮೆಂಟ್​ ಇಂಟರ್ಫೇಸ್​ ಮೂಲಕ ಮಾಡುವ ಪೇಮೆಂಟ್​ ನಾಳೆಯಿಂದ ದುಬಾರಿಯಾಗಲಿದೆ. ಈ ಯುಪಿಐ ಬಳಕೆದಾರರು ಈ ವ್ಯವಹಾರಕ್ಕೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತೆ .

4. ಸಣ್ಣ ಉದ್ಯಮದ ಮೇಲೆ ಜಿಎಸ್​ಟಿ ಪ್ರಭಾವ: 5 ಕೋಟಿ ರೂಪಾಯಿ ವಾರ್ಷಿಕ ಆದಾಯ ಹೊಂದಿರುವ ಉದ್ಯಮಿಗಳು ಇನ್ಮೇಲೆ 12 ಜಿಎಸ್​ಟಿ ಸೇಲ್ಸ್ ರಿರ್ಟನ್ಸ್​ ಸಲ್ಲಿಸುವ ಬದಲು ನಾಲ್ಕು ಜಿಎಸ್​ಟಿ ಸೇಲ್ಸ್ ರಿರ್ಟನ್ಸ್ ಸಲ್ಲಿಕೆ ಮಾಡಲಿದ್ದಾರೆ. ಈ ಬದಲಾವಣೆ 9.4 ಮಿಲಿಯನ್​ ಸಣ್ಣ ಉದ್ದಿಮೆದಾರರ ಮೇಲೆ ಪರಿಣಾಮ ಬೀರಲಿದೆ.

5. ನಾಳೆಯಿಂದ ಫಾಸ್ಟ್​ಟ್ಯಾಗ್​ ಕಡ್ಡಾಯ: ನಾಳೆಯಿಂದ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್​ಟ್ಯಾಗ್​​ ಕಡ್ಡಾಯವಾಗಿ ಇರಲಿದೆ. ಟೋಲ್​ಗಳಲ್ಲಿ ವಾಹನ ಸಂದಣಿ ಕಡಿಮೆ ಮಾಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

6. ಕಡಿಮೆ ಪ್ರೀಮಿಯಂಗೆ ಸರಳ ಜೀವ ವಿಮೆ: ಜನವರಿ 1ರಿಂದ ಕಡಿಮೆ ಪ್ರೀಮಿಯಂಗೆ ಸರಳ ಜೀವನ ವಿಮೆಯನ್ನ ಖರೀದಿ ಮಾಡಬಹುದಾಗಿದೆ. ಎಲ್ಲಾ ವಿಮಾ ಕಂಪನಿಗಳ ನಿಯಮ ಹಾಗೂ ಮೊತ್ತ ಒಂದೇ ಆಗಿರುತ್ತದೆ.

7. ಲ್ಯಾಂಡ್​​ಲೈನ್​​ನಿಂದ ಮೊಬೈಲ್​ ಸಂಖ್ಯೆಗೆ ಕರೆ: ಲ್ಯಾಂಡ್​ಲೈನ್​​ನಿಂದ ಮೊಬೈಲ್​ ನಂಬರ್​ಗೆ ಕರೆ ಮಾಡುವ ಮುನ್ನ ನೀವು ಇನ್ಮೇಲೆ ಮೊದಲು 0 ಸಂಖ್ಯೆಯನ್ನ ಸೇರಿಸಬೇಕಾಗುತ್ತೆ. ಈ ನಿಯಮ ಜನವರಿ 15ರಿಂದ ಜಾರಿಗೆ ಬರಲಿದೆ.

8. ಎಲ್​ಪಿಜಿ ದರ: 2021ರ ಮೊದಲ ತಿಂಗಳಿನಿಂದ ಎಲ್​​ಪಿಜಿ ಸಿಲಿಂಡರ್​ನ ಬೆಲೆ ತಿಂಗಳ ಮೊದಲ ದಿನದಂದು ಪರಿಷ್ಕರಣೆ ಆಗಲಿದೆ. ಅಂತಾರಾಷ್ಟ್ರೀಯ ರೂಪಾಯಿ ಮಾನದಂಡ ಹಾಗೂ ಯುಎಸ್​ ಡಾಲರ್​ ಎದುರು ರೂಪಾಯಿ ಮೌಲ್ಯ ಆಧರಿಸಿ ದರ ಪರಿಷ್ಕರಣೆ ಆಗಲಿದೆ.

9. ಕಾರು ಹಾಗೂ ಎಲೆಕ್ಟ್ರಾನಿಕ್​ ಸೌಲಭ್ಯಗಳ ದರ ಏರಿಕೆ: ಮಾರುತಿ ಸುಝುಕಿ, ಮಹೀಂದ್ರಾ & ಮಹೀಂದ್ರಾ ಕಂಪನಿಗಳ ವಾಹನಗಳ ದರ ಏರಿಕೆಯಾಗಲಿದೆ. ಬಿಡಿ ಭಾಗಗಳ ದರ ಏರಿಕೆಯಾದ ಹಿನ್ನೆಲೆ ವಾಹನಗಳ ಬೆಲೆ ನಾಳೆಯಿಂದ ಏರಿಕೆ ಕಾಣಲಿದೆ. ಕಾರುಗಳ ಜೊತೆಯಲ್ಲಿ ಟಿವಿ, ಫ್ರಿಡ್ಜ್​, ವಾಷಿಂಗ್​ ಮಷಿನ್​ಗಳ ದರವೂ 10 ಪ್ರತಿಶತದಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.

10. ಆಯ್ದ ಮೊಬೈಲ್​ಗಳಲ್ಲಿ ಮಾತ್ರ ವಾಟ್ಸಾಪ್​ ಸೌಕರ್ಯ: ಜನವರಿ 1ರಿಂದ ವಾಟ್ಸಾಪ್​ ಕೆಲ ವೇದಿಕೆಗಳಿಂದ ತನ್ನ ಬೆಂಬಲವನ್ನ ಹಿಂಪಡೆಯಲಿದೆ. ಹೀಗಾಗಿ ಓಎಸ್​ 4.0.3 ಹೊಂದಿರುವ ಆಂಡ್ರಾಯ್ಡ್​ ಫೋನ್​ಗಳು ಹಾಗೂ ಐಒಎಸ್​ 9 ಹೊಂದಿರುವ ಐಫೋನ್​, ಜಿಯೋ ಫೋನ್​ ಹಾಗೂ ಜಿಯೋ ಫೋನ್​ 2ಗಳಿಗೆ ವಾಟ್ಸಾಪ್​ ಸೌಕರ್ಯ ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...