alex Certify ಆಗಸ್ಟ್ 15 ರಂದು ಉಚಿತ ಪೆಟ್ರೋಲ್; ಆಧಾರ್ ಕಾರ್ಡ್ ತೋರಿಸಿ 5 ಲೀಟರ್ ತೈಲ ಪಡೆಯಲು ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್ 15 ರಂದು ಉಚಿತ ಪೆಟ್ರೋಲ್; ಆಧಾರ್ ಕಾರ್ಡ್ ತೋರಿಸಿ 5 ಲೀಟರ್ ತೈಲ ಪಡೆಯಲು ಆಫರ್

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಹೆಸರಿನವರಿಗೆ ಉಚಿತವಾಗಿ ಪೆಟ್ರೋಲ್ ನೀಡುವುದಾಗಿ ಘೋಷಿಸಲಾಗಿದೆ. ಗುಜರಾತ್ ನ ಭರೂಚ್ ಜಿಲ್ಲೆಯ ನೇತ್ರಂಗ್ ನಗರದ ಪೆಟ್ರೋಲ್ ಪಂಪ್ ನಲ್ಲಿ ನೀರಜ್ ಹೆಸರಿನ ಎಲ್ಲರಿಗೂ ಉಚಿತವಾಗಿ ಪೆಟ್ರೋಲ್ ನೀಡುವುದಾಗಿ ಹೇಳಿದ್ದು, 28 ಮಂದಿಯ ಗುರುತಿನ ಚೀಟಿ ನೋಡಿ ಉಚಿತವಾಗಿ ಪೆಟ್ರೋಲ್ ಹಾಕಲಾಗಿದೆ.

ಆಗಸ್ಟ್ 20 ರವರೆಗೆ ನೀರಜ್ ಹೆಸರಿನವರಿಗೆ ಉಚಿತ ರೋಪ್ ವೇ ಸರ್ವಿಸ್ ಒದಗಿಸುವುದಾಗಿ ಜುನಾಘಡದ ರೋಪ್ ಸರ್ವಿಸ್ ಸಂಸ್ಥೆ ಘೋಷಿಸಿದೆ.

ಕೇರಳದಲ್ಲಿಯೂ ನೀರಜ್ ಹೆಸರಿನವರಿಗೆ ಆಗಸ್ಟ್ 15 ರಂದು ಉಚಿತವಾಗಿ ಪೆಟ್ರೋಲ್ ಹಾಕಲಾಗುತ್ತದೆ. ಕೇರಳದ ಪೆರ್ಲಾದಲ್ಲಿರುವ ಕುದುಕೋಳಿ ಪೆಟ್ರೋಲ್ ಬಂಕ್ ನ ಮಾಲೀಕ ಅಬ್ದುಲ್ ಅವರು ನೀರಜ್ ಹೆಸರಿನವರಿಗೆ ಆಗಸ್ಟ್ 15 ರಂದು 5 ಲೀಟರ್ ಪೆಟ್ರೋಲ್ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ. ನೀರಜ್ ಹೆಸರಿನವರು ಆಧಾರ್ ಕಾರ್ಡ್ ತೋರಿಸಿ 5 ಲೀಟರ್ ಪೆಟ್ರೋಲ್ ಪಡೆಯಬಹುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...