ನಾಹಕ್ ಮೋಟಾರ್ಸ್ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಸೈಕಲ್ಗಳ ಬೆಲೆ 27 ಸಾವಿರ ರೂಪಾಯಿ ಆಗಿದೆ. ಹರಿಯಾಣ ಸಚಿವ ಪ್ರತಾಪ್ ಚಾಂದ್ ಸಾರಂಗಿ ಫರೀದಾಬಾದ್ನಲ್ಲಿ ಈ ಮೇಡ್ ಇನ್ ಇಂಡಿಯಾ ಸೈಕಲ್ಗಳನ್ನ ಲಾಂಚ್ ಮಾಡಿದ್ದಾರೆ.
ಎಲೆಕ್ಟ್ರಾನಿಕ್ ಬೈಸಿಕಲ್ಗಳಲ್ಲಿ ಲೀಥಿಯಂ ಬ್ಯಾಟರಿಯನ್ನ ಅಳವಡಿಸಲಾಗಿದೆ. ಈ ಬ್ಯಾಟರಿಗಳನ್ನ ನೀವು 2 ಗಂಟೆಗಳ ಅವಧಿಯಲ್ಲಿ ಚಾರ್ಜ್ ಮಾಡಬಹುದಾಗಿದೆ. ಒಂದು ಬಾರಿ ನೀವು ಫುಲ್ ಚಾರ್ಜ್ ಮಾಡಿದ್ರೆ ಈ ಸೈಕಲ್ 25 ಕಿಲೋಮೀಟರ್ಗಳವರೆಗೆ ಕ್ರಮಿಸಲಿದೆ. ಸಾಮಾನ್ಯ ಪವರ್ ಸಾಕೆಟ್ಗಳನ್ನೇ ಬಳಸಿ ಈ ಬೈಸಿಕಲ್ಗಳನ್ನ ಚಾರ್ಜ್ ಮಾಡಬಹುದಾಗಿದೆ.
ಕಂಪನಿ ಮೂರು ವಿಧಗಳಲ್ಲಿ ಇ ಬೈಸಿಕಲ್ಗಳನ್ನ ಲೋಕಾರ್ಪಣೆ ಮಾಡಿದೆ. ರೆಗ್ಯುಲರ್, ಪ್ರೀಮಿಯಂ ಹಾಗೂ ಐಶಾರಾಮಿ ಎಂಬ ಮೂರು ವಿಧಗಳಲ್ಲಿ ನಿಮಗೆ ಸೈಕಲ್ ಲಭ್ಯವಿದೆ. ಪ್ರೀಮಿಯಂ ಸೈಕಲ್ 25 ಕಿಲೋಮೀಟರ್ ಕ್ರಮಿಸಲಿದೆ. ಪೆಡಲ್ ಮೋಡ್ನಲ್ಲಿ 40 ಕಿಲೋಮೀಟರ್ವರೆಗೆ ಪ್ರಯಾಣ ಮಾಡಬಹುದಾಗಿದೆ.
ಐಶಾರಾಮಿಯಲ್ಲಿ 35 ಕಿಲೋಮೀಟರ್ಗೂ ಹೆಚ್ಚು ದೂರ ಬ್ಯಾಟರಿ ಸಾಮರ್ಥ್ಯದ ಮೇಲೆ ಕ್ರಮಿಸಬಹುದಾಗಿದೆ. ಪೆಡಲ್ನಲ್ಲಿ 50ಕ್ಕೂ ಹೆಚ್ಚು ಕಿಲೋಮೀಟರ್ ದೂರ ಕ್ರಮಿಸಬಹುದಾಗಿದೆ.