alex Certify ‘ಮೇಡ್​ ಇನ್​ ಇಂಡಿಯಾ’ ಇ ಬೈಸಿಕಲ್ ಮಾರುಕಟ್ಟೆಗೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೇಡ್​ ಇನ್​ ಇಂಡಿಯಾ’ ಇ ಬೈಸಿಕಲ್ ಮಾರುಕಟ್ಟೆಗೆ…!

ನಾಹಕ್​ ಮೋಟಾರ್ಸ್​ ಮೇಡ್​ ಇನ್​ ಇಂಡಿಯಾ ಎಲೆಕ್ಟ್ರಿಕ್​ ಸೈಕಲ್​​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಈ ಎಲೆಕ್ಟ್ರಿಕ್​ ಸೈಕಲ್​ಗಳ ಬೆಲೆ 27 ಸಾವಿರ ರೂಪಾಯಿ ಆಗಿದೆ. ಹರಿಯಾಣ ಸಚಿವ ಪ್ರತಾಪ್​ ಚಾಂದ್ ಸಾರಂಗಿ ಫರೀದಾಬಾದ್ನಲ್ಲಿ ಈ ಮೇಡ್​ ಇನ್​ ಇಂಡಿಯಾ ಸೈಕಲ್​ಗಳನ್ನ ಲಾಂಚ್​ ಮಾಡಿದ್ದಾರೆ.

ಎಲೆಕ್ಟ್ರಾನಿಕ್​ ಬೈಸಿಕಲ್​​ಗಳಲ್ಲಿ ಲೀಥಿಯಂ ಬ್ಯಾಟರಿಯನ್ನ ಅಳವಡಿಸಲಾಗಿದೆ. ಈ ಬ್ಯಾಟರಿಗಳನ್ನ ನೀವು 2 ಗಂಟೆಗಳ ಅವಧಿಯಲ್ಲಿ ಚಾರ್ಜ್​ ಮಾಡಬಹುದಾಗಿದೆ. ಒಂದು ಬಾರಿ ನೀವು ಫುಲ್​ ಚಾರ್ಜ್​ ಮಾಡಿದ್ರೆ ಈ ಸೈಕಲ್​ 25 ಕಿಲೋಮೀಟರ್​ಗಳವರೆಗೆ ಕ್ರಮಿಸಲಿದೆ. ಸಾಮಾನ್ಯ ಪವರ್​ ಸಾಕೆಟ್​ಗಳನ್ನೇ ಬಳಸಿ ಈ ಬೈಸಿಕಲ್​ಗಳನ್ನ ಚಾರ್ಜ್​ ಮಾಡಬಹುದಾಗಿದೆ.

ಕಂಪನಿ ಮೂರು ವಿಧಗಳಲ್ಲಿ ಇ ಬೈಸಿಕಲ್​ಗಳನ್ನ ಲೋಕಾರ್ಪಣೆ ಮಾಡಿದೆ. ರೆಗ್ಯುಲರ್​, ಪ್ರೀಮಿಯಂ ಹಾಗೂ ಐಶಾರಾಮಿ ಎಂಬ ಮೂರು ವಿಧಗಳಲ್ಲಿ ನಿಮಗೆ ಸೈಕಲ್​ ಲಭ್ಯವಿದೆ. ಪ್ರೀಮಿಯಂ ಸೈಕಲ್​ 25 ಕಿಲೋಮೀಟರ್​ ಕ್ರಮಿಸಲಿದೆ. ಪೆಡಲ್​ ಮೋಡ್​ನಲ್ಲಿ 40 ಕಿಲೋಮೀಟರ್​ವರೆಗೆ ಪ್ರಯಾಣ ಮಾಡಬಹುದಾಗಿದೆ.

ಐಶಾರಾಮಿಯಲ್ಲಿ 35 ಕಿಲೋಮೀಟರ್​ಗೂ ಹೆಚ್ಚು ದೂರ ಬ್ಯಾಟರಿ ಸಾಮರ್ಥ್ಯದ ಮೇಲೆ ಕ್ರಮಿಸಬಹುದಾಗಿದೆ. ಪೆಡಲ್​ನಲ್ಲಿ 50ಕ್ಕೂ ಹೆಚ್ಚು ಕಿಲೋಮೀಟರ್​ ದೂರ ಕ್ರಮಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...