alex Certify ಪ್ರಯಾಣಿಕರ ಗಮನಕ್ಕೆ: ಡಿ.​30 ರಿಂದ ದೆಹಲಿ – ಮುಂಬೈ ನಡುವೆ ಸಂಚರಿಸಲಿದೆ ಸ್ಪೆಶಲ್​ ರೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರ ಗಮನಕ್ಕೆ: ಡಿ.​30 ರಿಂದ ದೆಹಲಿ – ಮುಂಬೈ ನಡುವೆ ಸಂಚರಿಸಲಿದೆ ಸ್ಪೆಶಲ್​ ರೈಲು

ಮುಂಬೈ ಮತ್ತು ಹಜರತ್ ನಿಜಾಮುದ್ದೀನ್ (ದೆಹಲಿ) ನಡುವೆ ವಾರದ ನಾಲ್ಕು ದಿನಗಳಲ್ಲಿ ರಾಜಧಾನಿ ವಿಶೇಷ ರೈಲು ಚಲಿಸಲಿದೆ ಎಂದು ಕೇಂದ್ರ ರೈಲ್ವೆ (ಸಿಆರ್) ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್‌ನಲ್ಲಿ ಕೊರೊನಾ ವೈರಸ್ ಸ್ಫೋಟಗೊಂಡ ನಂತರ ಮುಂಬೈ – ದೆಹಲಿ ರಾಜಧಾನಿ ರೈಲು ಸ್ಥಗಿತಗೊಂಡಿತ್ತು.

01221 ಸಂಖ್ಯೆಯ ರಾಜಧಾನಿ ಸ್ಪೆಷಲ್​ ರೈಲು ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಸಂಚಾರ ನಡೆಸಲಿದೆ. ಡಿಸೆಂಬರ್​ 30 ರಿಂದ ಸಂಜೆ 4.10ಕ್ಕೆ ಛತ್ರಪತಿ ಶಿವಾಜಿ ಮಹಾರಾಜ್​ ಟರ್ಮಿನಲ್​ನಿಂದ ಈ ರೈಲು ಹೊರಡಲಿದೆ. ಮಾರನೇ ದಿನ ಬೆಳಗ್ಗೆ 11 ಗಂಟೆಗೆ ರೈಲು ಹಜರತ್​ ನಿಜಾಮುದ್ದೀನ್​ ತಲುಪಲಿದೆ.

01222 ಸಂಖ್ಯೆಯ ರಾಜಧಾನಿ ಸ್ಪೆಷಲ್​ ರೈಲು ಡಿಸೆಂಬರ್ 31ರಿಂದ ಪ್ರತಿ ಮಂಗಳವಾರ, ಗುರುವಾರ, ಶನಿವಾರ ಹಾಗೂ ಭಾನುವಾರ ಸಂಜೆ 4.55ಕ್ಕೆ ಹಜರತ್​ ನಿಜಾಮುದ್ದೀನ್​ನಿಂದ ಹೊರಟು ಮಾರನೇ ದಿನ ಬೆಳಗ್ಗೆ 11.50ಕ್ಕೆ ಮುಂಬೈ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಸಿ ಪ್ರಥಮ ದರ್ಜೆಯ 1 ಬೋಗಿ, ಎಸಿ 2ನೇ ಶ್ರೇಣಿಯ 5 ಬೋಗಿ, 11 ಎಸಿ -3ನೇ ಶ್ರೇಣಿ ಹಾಗೂ ಒಂದು ಪ್ಯಾಂಟ್ರಿ ಕಾರು ಸೇರಿದಂತೆ 19 ಕೋಚ್​ ಹೊಂದಿರುವ ರೈಲು ಕಲ್ಯಾಣ್​, ನಾಸಿಕ್​ ರಸ್ತೆ, ಜಲ್ಗಾಂವ್​, ಭೂಪಾಲ್​, ಝಾನ್ಸಿ ಹಾಗೂ ಆಗ್ರಾಗಳಲ್ಲಿ ನಿಲ್ಲಲಿದೆ.

01221 ರಾಜಧಾನಿ ವಿಶೇಷ ರೈಲಿನ ಬುಕ್ಕಿಂಗ್​ ಡಿಸೆಂಬರ್ 25ರಿಂದ ಆರಂಭವಾಗಲಿದೆ. ದೃಢೀಕೃತ ಟಿಕೆಟ್​ ಹೊಂದಿರುವ ಪ್ರಯಾಣಿಕರು ಮಾತ್ರ ಈ ವಿಶೇಷ ರೈಲಿನಲ್ಲಿ ಸಂಚಾರ ಮಾಡಲು ಅರ್ಹತೆ ಪಡೆದಿರುತ್ತಾರೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...