alex Certify ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಕುಸಿತ ಕಂಡ ಮುಕೇಶ್‌ ಅಂಬಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಕುಸಿತ ಕಂಡ ಮುಕೇಶ್‌ ಅಂಬಾನಿ

ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್​ ಅಂಬಾನಿ ಸ್ಥಾನ ವಿಶ್ವದ ಶ್ರೀಮಂತ ಬಿಲಿಯನೇರ್​ಗಳ ಪಟ್ಟಿಯಲ್ಲಿ ಮತ್ತಷ್ಟು ಕೆಳಕ್ಕೆ ಕುಸಿದಿದೆ. ಬ್ಲೂಮ್​ ಬರ್ಗ್​ ಬಿಲಿಯನೇರ್​ ಸೂಚ್ಯಂಕದ ಪ್ರಕಾರ ಮುಕೇಶ್​ ಪ್ರಸ್ತುತ ವಿಶ್ವದ 13ನೇ ಶ್ರೀಮಂತ ಎನಿಸಿಕೊಂಡಿದ್ದಾರೆ.

ಬ್ಲೂಮ್​ ಬರ್ಗ್ ಸೂಚ್ಯಂಕದ ಪ್ರಕಾರ ಅಂಬಾನಿಯ ಪ್ರಸ್ತುತ ಆಸ್ತಿ ಮೌಲ್ಯ 5.36 ಲಕ್ಷ ಕೋಟಿ ರೂಪಾಯಿ ಆಗಿದೆ.

ಬ್ಲೂಮ್​ಬರ್ಗ್​ ಶ್ರೇಯಾಂಕದ ಪ್ರಕಾರ ಆಗಸ್ಟ್​ 2020ರಲ್ಲಿ ಅಂಬಾನಿ ನಾಲ್ಕನೇ ಸ್ಥಾನಕ್ಕೆ ಏರಿದ್ದರು. ಆದರೆ ಇತ್ತೀಚಿನ ಆರ್​ಐಎಲ್​ ಷೇರುಗಳಲ್ಲಿನ ತಿದ್ದುಪಡಿಯಿಂದಾಗಿ ಅಂಬಾನಿ ನಿವ್ವಳ ಆಸ್ತಿ ಮೌಲ್ಯ ಕುಸಿತ ಕಂಡಿದೆ. ಕಳೆದ ಮೂರು ತಿಂಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್​ ತನ್ನ ಸಾರ್ವಕಾಲಿಕ ಆಸ್ತಿಯಲ್ಲಿ 18.3 ಪ್ರತಿಶತದಷ್ಟು ಇಳಿಕೆ ಕಂಡಿದೆ.

ಆರ್​ಐಎಲ್ ಷೇರು ಕಳೆದ ವರ್ಷ ಮಾರ್ಚ್​ನಲ್ಲಿ 128.7 ಪ್ರತಿಶತದಷ್ಟು ಏರಿಕೆ ಕಂಡಿದ್ದು 32.2 ಪ್ರತಿಶತದಷ್ಟು ಲಾಭ ಕಂಡಿದೆ. ಆದರೆ ಅಮೆರಿಕ ಇ ಕಾಮರ್ಸ್​ ದೈತ್ಯ ಅಮೆಕಾನ್​​ ಫ್ಯೂಚರ್​ ಗ್ರೂಪ್​ನೊಂದಿಗೆ ಹೂಡಿಕೆ ಮಾಡಿದ ಬಳಿಕ ಆರ್​ಐಎಲ್​ ಷೇರು ಇಳಿಮುಖವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...