alex Certify 9,499 ರೂ.ಗೆ ಸಿಗ್ತಿದೆ 5000ಎಂಎಎಚ್ ಬ್ಯಾಟರಿ ಫೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

9,499 ರೂ.ಗೆ ಸಿಗ್ತಿದೆ 5000ಎಂಎಎಚ್ ಬ್ಯಾಟರಿ ಫೋನ್

Moto E7 Plus to launch in India today at 12 pm on Flipkart: All we know so  far- Technology News, Firstpost

ಮೊಟೊರೊಲಾ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಮೋಟೋ ಇ 7 ಪ್ಲಸ್ ಬಿಡುಗಡೆ ಮಾಡಿದೆ. ಕಂಪನಿಯು ಈ ಫೋನ್ ಬೆಲೆಯನ್ನು 9,499 ರೂಪಾಯಿಗೆ ನಿಗದಿಪಡಿಸಿದೆ. ಸೆಪ್ಟೆಂಬರ್ 30 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ನಡೆಯಲಿದೆ. ಗ್ರಾಹಕರು ಮಿಸ್ಟಿ ಬ್ಲೂ ಮತ್ತು ಟ್ವಿಲೈಟ್ ಆರೆಂಜ್ ಕಲರ್ ನಲ್ಲಿ ಖರೀದಿ ಮಾಡಬಹುದು. ಫೋನ್‌ನ ಅತ್ಯಂತ ವಿಶೇಷವೆಂದರೆ ಅದರ 5000ಎಂಎಎಚ್ ಬ್ಯಾಟರಿ.

ಫೋನ್ 6.5-ಇಂಚಿನ ಮ್ಯಾಕ್ಸ್ ವಿಷನ್ ಎಚ್ಡಿ + ಡಿಸ್ಪ್ಲೇ ಹೊಂದಿದೆ. ಫೋನ್‌ನಲ್ಲಿ 4 ಜಿಬಿ ರ್ಯಾಮ್   ಮತ್ತು 64 ಜಿಬಿ ಸ್ಟೋರೇಜ್ ನೀಡಲಾಗಿದೆ.  ಮೊಟೊರೊಲಾದ ಈ ಫೋನ್ ಆಂಡ್ರಾಯ್ಡ್ 10 ನಲ್ಲಿ ಕಾರ್ಯ ನಿರ್ವಹಿಸುತ್ತದೆ.

ಮೊಟೊರೊಲಾ, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಹೊಂದಿದ್ದು, ಫೋನ್ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಮೋಟೋ ಇ 7 ಪ್ಲಸ್ 5000 ಎಮ್ಎಹೆಚ್ ಬ್ಯಾಟರಿಯನ್ನು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...