ಮದರ್ ಡೈರಿ ದೆಹಲಿ-ಎನ್‌ಸಿಆರ್ ನಲ್ಲಿ ಪೂರ್ಣ ಕೆನೆ ಹಾಲಿನ ಬೆಲೆಯನ್ನು ಲೀಟರ್ ಗೆ 1 ರೂ., ಟೋಕನ್ ಹಾಲಿನ ಬೆಲೆಯನ್ನು ಲೀಟರ್ ಗೆ 2 ರೂ. ಹೆಚ್ಚಳ ಮಾಡಿದೆ.
ಇನ್‌ಪುಟ್ ವೆಚ್ಚದ ಏರಿಕೆ ಉಲ್ಲೇಖಿಸಿ ಸೋಮವಾರದಿಂದ ಜಾರಿಗೆ ಬರುವಂತೆ ದೆಹಲಿ-ಎನ್‌ಸಿಆರ್ ಮಾರುಕಟ್ಟೆಯಲ್ಲಿ ಫುಲ್‌ಕ್ರೀಮ್ ಹಾಲಿನ ಬೆಲೆಯನ್ನು ಲೀಟರ್‌ಗೆ 1 ರೂಪಾಯಿ ಮತ್ತು ಟೋಕನ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ. ಹೆಚ್ಚಿಸಲು ಮದರ್ ಡೈರಿ ನಿರ್ಧರಿಸಿದೆ.
ದಿನಕ್ಕೆ 30 ಲಕ್ಷ ಲೀಟರ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸರಬರಾಜು ಮಾಡುವ ದೆಹಲಿ-ಎನ್‌ಸಿಆರ್‌ನ ಪ್ರಮುಖ ಹಾಲು ಪೂರೈಕೆದಾರರಲ್ಲಿ ಒಂದಾದ ಮದರ್ ಡೈರಿಯು ಈ ವರ್ಷ ಹಾಲಿನ ಬೆಲೆಯಲ್ಲಿ ನಾಲ್ಕನೇ ಸುತ್ತಿನ ಏರಿಕೆಯಾಗಿದೆ.
ಮದರ್ ಡೈರಿಯು ಪೂರ್ಣ ಕೆನೆ ಹಾಲಿನ ಬೆಲೆಯನ್ನು ಲೀಟರ್‌ಗೆ 64 ರೂ.ಗೆ ಹೆಚ್ಚಿಸಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
500 ಮಿಲಿ ಪ್ಯಾಕ್ ಗಳಲ್ಲಿ ಮಾರಾಟವಾಗುವ ಪೂರ್ಣ ಕೆನೆ ಹಾಲಿನ ಬೆಲೆಯನ್ನು ಕಂಪನಿಯು ಪರಿಷ್ಕರಿಸಿಲ್ಲ.
48 ರೂ. ಇರುವ ಟೋಕನ್ ಹಾಲು ಸೋಮವಾರದಿಂದ ಲೀಟರ್ ಗೆ 50 ರೂ.ಗೆ ಮಾರಾಟವಾಗಲಿದೆ.
ಬೆಲೆಯಲ್ಲಿನ ಪರಿಷ್ಕರಣೆಯು ಗ್ರಾಹಕರಿಗೆ ಗುಣಮಟ್ಟದ ಹಾಲನ್ನು ಖಾತ್ರಿಪಡಿಸುವ ಜೊತೆಗೆ ಸರಿಯಾದ ಸಂಭಾವನೆಯೊಂದಿಗೆ ರೈತರಿಗೆ ಬೆಂಬಲವನ್ನು ಮುಂದುವರಿಸಲು ಕಂಪನಿಗೆ ಅನುವು ಮಾಡಿಕೊಡುತ್ತದೆ ಎಂದು ಮದರ್ ಡೈರಿ ಹೇಳಿದೆ.