alex Certify ಬರೋಬ್ಬರಿ $22 ದಶಲಕ್ಷಕ್ಕೆ ಮಾರಾಟವಾದ ಮೈಕೆಲ್ ಜಾಕ್ಸನ್ ಎಸ್ಟೇಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ $22 ದಶಲಕ್ಷಕ್ಕೆ ಮಾರಾಟವಾದ ಮೈಕೆಲ್ ಜಾಕ್ಸನ್ ಎಸ್ಟೇಟ್

Michael Jackson's Neverland Ranch Sold for Knockdown Price | Top News | US News

ಜಗಮೆಚ್ಚಿನ ಡಾನ್ಸರ್‌ ಮೈಕೆಲ್ ಜಾಕ್ಸನ್‌ ಮೃತಪಟ್ಟು ಹತ್ತು ವರ್ಷಗಳ ಬಳಿಕ ಅವರ ಎಸ್ಟೇಟ್ ಒಂದನ್ನು ಮಾರಾಟ ಮಾಡಲಾಗಿದೆ. ಕ್ಯಾಲಿಫೋರ್ನಿಯಾದ ನೆವರ್ಲೆಂಡ್ ರಾಂಚ್‌ ಎಂಬಲ್ಲಿರುವ ಈ ಎಸ್ಟೇಟ್‌ನಲ್ಲಿ ಚಿಕ್ಕ ಹುಡುಗನಿಗೆ ಲೈಂಗಿಕ ಕಿರುಕುಳ ಕೊಟ್ಟ ಆಪಾದನೆ ಮೇಲೆ ವಿಚಾರಣೆ ಎದುರಿಸಿದ ಬಳಿಕ ಈ ಜಾಗ ತೊರೆದಿದ್ದರು ಜಾಕ್ಸನ್.

ಶತಕೋಟ್ಯಧೀಶ ಹೂಡಿಕೆದಾರೂ ಹಾಗೂ ಜಾಕ್ಸನ್ ಕುಟುಂಬದ ಹಳೆಯ ಸ್ನೇಹಿತರೂ ಆದ ರಾನ್ ಬರ್ಕ್ಲೆ 2700 ಎಕರೆ ವಿಸ್ತಾರದ ಈ ಎಸ್ಟೇಟ್ ‌ಅನ್ನು ಖರೀದಿ ಮಾಡಿದ್ದಾರೆ. $22 ದಶಲಕ್ಷಕ್ಕೆ ಈ ಎಸ್ಟೇಟ್ ಮಾರಾಟವಾಗಿದೆ ಎಂದು ವಾಲ್‌ ಸ್ಟ್ರೀಟ್ ಜರ್ನಲ್‌ನಲ್ಲಿ ವರದಿಯಾಗಿದೆ.

ಪ್ರೊಫೋಲ್ ಅನಸ್ತೇಷಿಯಾದ ಓವರ್‌ಡೋಸ್‌ನಿಂದ 2009ರಲ್ಲಿ ಮೃತಪಟ್ಟ ಜಾಕ್ಸನ್‌ಗೆ ಆಗ 50 ವರ್ಷ ವಯಸ್ಸಾಗಿತ್ತು. ಲಾಸ್ ಏಂಜಿಲೀಸ್‌ನಿಂದ 193 ಕಿಮೀ ಉತ್ತರಕ್ಕೆ ಇರುವ ಈ ಆಸ್ತಿಯನ್ನು ಜಾಕ್ಸನ್‌ 1988ರಲ್ಲಿ $19.5 ದಶಲಕ್ಷಕ್ಕೆ ಖರೀದಿ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...