alex Certify ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಅತ್ಯಾಧುನಿಕ ಮಾದರಿಯ ಎಲೆಕ್ಟ್ರಿಕ್​ ಕಾರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಅತ್ಯಾಧುನಿಕ ಮಾದರಿಯ ಎಲೆಕ್ಟ್ರಿಕ್​ ಕಾರ್..!

ಪೆಟ್ರೋಲ್​ – ಡೀಸೆಲ್​ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರೋದ್ರಿಂದ ಭಾರತದಲ್ಲಿ ಕ್ರಮೇಣವಾಗಿ ಎಲೆಕ್ಟ್ರಿಕ್​ ಕಾರುಗಳಿಗೆ ಡಿಮ್ಯಾಂಡ್​ ಹೆಚ್ಚುತ್ತಿದೆ.

ಗ್ರಾಹಕರ ಈ ಆಸಕ್ತಿಯನ್ನ ಗಮನದಲ್ಲಿ ಇಟ್ಟುಕೊಂಡು ಎಂಜಿ ಮೋಟಾರ್ಸ್​ ಅಪ್​ಗ್ರೇಡೆಡ್​ ಮಿಡ್​ ಸೈಜ್​​ ಎಸ್​​ಯುವಿ ಎಂಜಿ ಜೆಡ್​​ಎಸ್​ಇವಿಯನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡೋದಾಗಿ ಹೇಳಿದೆ.

ಫೆಬ್ರವರಿ 8ನೇ ತಾರೀಖಿನಂದು ಎಂಜಿ ಮೋಟಾರ್ಸ್​ ಈ ಕಾರನ್ನ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ.

ಕಂಪನಿಯು ಎಂಜಿ ಜೆಡ್​ಎಸ್​​ ಎಲೆಕ್ಟ್ರಿಕ್​ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ. ಆದರೆ MG ZS EV ಕಾರಿನ ಇಂಟೀರಿಯರ್​ ಹಾಗೂ ಎಕ್ಸ್​ಟಿರೀಯರ್​ ಫೀಚರ್ಸ್​ನಲ್ಲಿ ಬದಲಾವಣೆ ಮಾಡಬಹುದು ಎಂದು ಹೇಳಲಾಗ್ತಿದೆ. ಕಂಪನಿಯು ಈ ಕಾರು ಒಂದು ಬಾರಿ ಚಾರ್ಜ್​ ಮಾಡಿದ್ರೆ 340 ಕಿಲೋಮೀಟರ್​ವರೆಗೆ ಚಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಇದಕ್ಕೂ ಮೊದಲು ಎಂಜಿ ಮೋಟಾರ್ಸ್ ದೇಶದ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್​ ಎಸ್​ಯುವಿ MG ZS ಲಾಂಚ್​  ಮಾಡಿದೆ. ಸ್ವಲ್ಪ ಸಮಯದ ಹಿಂದೆ ಕಂಪನಿಯ ಅಧ್ಯಕ್ಷ ಹಾಗೂ ಮುಖ್ಯ ನಿರ್ದೇಶಕ ರಾಜೀವ್​ ಛಾಬಾ, ಈ ಕಾರಿನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಭಾರತದಲ್ಲೇ ತಯಾರು ಮಾಡಲಾಗಿದೆ. ಇದರಿಂದ ಕಾರಿನ ದರವೂ ಕಡಿಮೆ ಇರಲಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...