alex Certify ದೇಶದ ಜನತೆಗೆ ಗುಡ್ ನ್ಯೂಸ್: ನಕಲಿ ಔಷಧಕ್ಕೆ ಕಡಿವಾಣ ಹಾಕಲು ಬಾರ್ ಕೋಡ್, ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಗುಡ್ ನ್ಯೂಸ್: ನಕಲಿ ಔಷಧಕ್ಕೆ ಕಡಿವಾಣ ಹಾಕಲು ಬಾರ್ ಕೋಡ್, ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿ

ನವದೆಹಲಿ: ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ನಕಲಿ ಔಷಧಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಔಷದಗಳ ಪ್ಯಾಕ್ ಗಳ ಮೇಲೆ ಔಷಧಿಗಳ ಕುರಿತಾದ ಸಮಗ್ರ ಮಾಹಿತಿ ನೀಡುವ ಬಾರ್ ಕೋಡ್ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ.

ಇದಕ್ಕಾಗಿ ಎಲ್ಲ ಸಿದ್ಧತೆ ಪೂರ್ಣಗೊಂಡಿದ್ದು, ಶೀಘ್ರವೇ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು. ಪ್ರತಿ ಔಷಧಗಳ ಮೇಲೆ ಬಾರ್ ಕೋಡ್ ಅಥವಾ ಕ್ಯೂಆರ್ ಕೋಡ್ ಮುದ್ರಿಸಲಾಗುವುದು. ಇದನ್ನು ಸ್ಕ್ಯಾನ್ ಮಾಡಿದಾಗ ಔಷಧದ ವಿಶೇಷ ಗುರುತಿನ ಕೋಡ್, ಸಾಮಾನ್ಯ ಮತ್ತು ಜೆನೆರಿಕ್ ಹೆಸರು, ಬ್ರಾಂಡ್ ನೇಮ್, ಉತ್ಪಾದಕರ ವಿಳಾಸ, ಬ್ಯಾಚ್ ನಂಬರ್, ಉತ್ಪಾದನೆ ಮತ್ತು ಅವಧಿ ಮುಕ್ತಾಯದ ದಿನಾಂಕ, ಲೈಸೆನ್ಸ್ ನಂಬರ್ ಸೇರಿದಂತೆ ಹಲವು ವಿಷಯಗಳು ಲಭ್ಯವಾಗಲಿವೆ. ಆರಂಭಿಕ ಹಂತದಲ್ಲಿ 300 ಔಷಧಗಳಿಗೆ ಬಾರ್ ಕೋಡ್ ವ್ಯವಸ್ಥೆ ಜಾರಿ ಮಾಡಲಿದ್ದು, ನಂತರ ಇಡೀ ಔಷಧ ವಲಯಕ್ಕೆ ಈ ವ್ಯವಸ್ಥೆ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...