alex Certify ಮಣಿಪಾಲ್ ಹಾಸ್ಪಿಟಲ್ಸ್ ತೆಕ್ಕೆಗೆ ಮತ್ತೊಂದು ಪ್ರತಿಷ್ಠಿತ ಆಸ್ಪತ್ರೆ, ಕೊಲಂಬಿಯಾ ಏಷ್ಯಾ ಬಳಿಕ ವಿಕ್ರಂ ಹಾಸ್ಪಿಟಲ್ ಖರೀದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಣಿಪಾಲ್ ಹಾಸ್ಪಿಟಲ್ಸ್ ತೆಕ್ಕೆಗೆ ಮತ್ತೊಂದು ಪ್ರತಿಷ್ಠಿತ ಆಸ್ಪತ್ರೆ, ಕೊಲಂಬಿಯಾ ಏಷ್ಯಾ ಬಳಿಕ ವಿಕ್ರಂ ಹಾಸ್ಪಿಟಲ್ ಖರೀದಿ

ಬೆಂಗಳೂರು: ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ನ ಆಸ್ಪತ್ರೆಗಳನ್ನು ಖರೀದಿಸಿದ್ದ ಮಣಿಪಾಲ್ ಹಾಸ್ಪಿಟಲ್ಸ್ ಬೆಂಗಳೂರಿನ ಪ್ರತಿಷ್ಠಿತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವಿಕ್ರಂ ಹಾಸ್ಪಿಟಲ್ ನ ಶೇಕಡ 100 ರಷ್ಟು ಷೇರುಗಳನ್ನು ಖರೀದಿಸಿದೆ.

ದೇಶದ ಎರಡನೆಯ ಅತಿ ದೊಡ್ಡ ಆಸ್ಪತ್ರೆಯ ಸಮೂಹವಾಗಿರುವ ಮಣಿಪಾಲ್ ಹಾಸ್ಪಿಟಲ್ಸ್ ಇತ್ತೀಚೆಗೆ ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ನ ಆಸ್ಪತ್ರೆಗಳನ್ನು ಖರೀದಿಸಿತ್ತು. ಇದರ ನಂತರದಲ್ಲಿ ವಿಕ್ರಂ ಹಾಸ್ಪಿಟಲ್ ನ ಶೇಕಡ 100 ರಷ್ಟು ಷೇರು ಖರೀದಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳನ್ನು ಏಪ್ರಿಲ್‌ನಲ್ಲಿ 2,100 ಕೋಟಿ ರೂ.ಗಳಿಗೆ ಖರೀದಿಸಿದ್ದ ಮಣಿಪಾಲ್ ಹಾಸ್ಪಿಟಲ್ಸ್ 350 ಕೋಟಿ ರೂ.ಗೆ ವಿಕ್ರಮ್ ಆಸ್ಪತ್ರೆಯನ್ನು ಖರೀದಿಸಿದೆ ಎನ್ನಲಾಗಿದೆ. ಅಪೊಲೊ ಆಸ್ಪತ್ರೆಗಳ ನಂತರ ಮಣಿಪಾಲ್ ಹಾಸ್ಪಿಟಲ್ಸ್ ದೇಶದ ಎರಡನೇ ಅತಿದೊಡ್ಡ ಆಸ್ಪತ್ರೆ ಸಮೂಹವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...