alex Certify LPG ಗ್ರಾಹಕರಿಗೆ ಬಿಗ್‌ ಶಾಕ್: ಲಾಕ್ ಡೌನ್ ಮಧ್ಯೆ ಜನಸಾಮಾನ್ಯರ ಜೇಬಿಗೆ ಬಿತ್ತು ಕತ್ತರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

LPG ಗ್ರಾಹಕರಿಗೆ ಬಿಗ್‌ ಶಾಕ್: ಲಾಕ್ ಡೌನ್ ಮಧ್ಯೆ ಜನಸಾಮಾನ್ಯರ ಜೇಬಿಗೆ ಬಿತ್ತು ಕತ್ತರಿ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ, ಲಾಕ್ ‌ಡೌನ್ 5.0 ರ ಮೊದಲ ದಿನದಂದು ಸಾಮಾನ್ಯ ಜನರಿಗೆ ದೊಡ್ಡ ಹಿನ್ನಡೆಯಾಗಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು ಹೆಚ್ಚಿಸಿವೆ. ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 11.50 ರೂಪಾಯಿ ಹೆಚ್ಚಾಗಿದೆ.

ಇತರ ನಗರಗಳಲ್ಲಿಯೂ ಸಹ  ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಂದಿನಿಂದ ಹೆಚ್ಚಿಸಲಾಗಿದೆ. ಈ ಮೊದಲು ಮೇ ತಿಂಗಳಲ್ಲಿ 162.50 ರೂಪಾಯಿವರೆಗೆ ಬೆಲೆ ಇಳಿಕೆಯಾಗಿತ್ತು.  ಅದೇ ಸಮಯದಲ್ಲಿ, 19 ಕೆಜಿ ಸಿಲಿಂಡರ್ ಬೆಲೆ 1139.50 ರೂಪಾಯಿಗೆ  ಏರಿದೆ.

ಈಗ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 593 ರೂಪಾಯಿಗೆ ಬಂದು ನಿಂತಿದೆ. ಅದು ಈ ಹಿಂದೆ 581.50 ರೂಪಾಯಿಯಿತ್ತು. ಜೂನ್ 1 ರಂದು ವಿಮಾನ ಇಂಧನ ಬೆಲೆಯೂ ಹೆಚ್ಚಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...