alex Certify ಯಾವ್ಯಾವ ರಾಜ್ಯದಲ್ಲಿ LPG ಸಿಲಿಂಡರ್​ ಬೆಲೆ ಎಷ್ಟೆಷ್ಟಿದೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ್ಯಾವ ರಾಜ್ಯದಲ್ಲಿ LPG ಸಿಲಿಂಡರ್​ ಬೆಲೆ ಎಷ್ಟೆಷ್ಟಿದೆ ಗೊತ್ತಾ…?

ದೇಶಾದ್ಯಂತ ಸಬ್ಸಿಡಿ ರಹಿತ ಎಲ್​ಪಿಜಿ ಬೆಲೆ 50 ರೂಪಾಯಿಗಳಷ್ಟು ಏರಿಕೆಯಾಗಿದೆ ಅಂತಾ ಭಾರತೀಯ ತೈಲ ನಿಗಮ ಮಾಹಿತಿ ನೀಡಿದೆ. ಕಳೆದ 5 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್​ನ ಬೆಲೆ ಹೆಚ್ಚಾಗಿದೆ.

ಎಲ್​​ಪಿಜಿ ಗ್ಯಾಸ್​ ಸಿಲಿಂಡರ್​ನ ಬೆಲೆಯನ್ನ ಸರ್ಕಾರಿ ತೈಲ ಕಂಪನಿಗಳು ನಿರ್ಧರಿಸುತ್ತವೆ ಹಾಗೂ ಮಾಸಿಕ ಆಧಾರದ ಮೇಲೆ ದರವನ್ನ ಪರಿಷ್ಕರಿಸಲಾಗುತ್ತದೆ. ಕೊನೆಯ ಬಾರಿಗೆ ಜುಲೈನಲ್ಲಿ ಎಲ್​ಪಿಜಿ ಸಿಲಿಂಡರ್ ದರ ಬದಲಾವಣೆಯಾಗಿತ್ತು.

ಪರಿಷ್ಕೃತ ದರದಿಂದಾಗಿ 14.2 ಕೆಜಿಯುಳ್ಳ ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್​ ಬೆಲೆ ಕರ್ನಾಟಕದಲ್ಲಿ 647 ರೂ., ದೆಹಲಿಯಲ್ಲಿ 644 ರೂ., ಕೊಲ್ಕತ್ತಾದಲ್ಲಿ 670.50 ರೂಪಾಯಿ ಹಾಗೂ ಮುಂಬೈನಲ್ಲಿ 644 ರೂಪಾಯಿಗೆ ತಲುಪಿದೆ. ಚೆನ್ನೈನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್​ ಬೆಲೆ 660 ರೂಪಾಯಿ ತಲುಪಿದೆ.

ಭಾರತದಲ್ಲಿ ವರ್ಷಕ್ಕೆ ಗರಿಷ್ಠ 12 ಎಲ್​ಪಿಜಿ ಸಿಲಿಂಡರ್​ ಖರೀದಿಗೆ ಸಬ್ಸಿಡಿ ದರದಲ್ಲಿ ಅವಕಾಶವಿದೆ. ಸಿಲಿಂಡರ್​ಗಳನ್ನ ಖರೀದಿಸುವ ಸಂದರ್ಭದಲ್ಲಿ ನೀವು ಪೂರ್ಣ ಬೆಲೆಗೆ ಖರೀದಿ ಮಾಡಬೇಕಾಗುತ್ತೆ. ಬಳಿಕ ಸಬ್ಸಿಡಿ ಹಣ ಗ್ರಾಹಕನ ಬ್ಯಾಂಕ್​ ಖಾತೆಗೆ ಜಮಾವಣೆ ಮಾಡಲಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...