alex Certify ಹೀಗೆ ಮಾಡಿದ್ರೆ ಉಚಿತವಾಗಿ ಸಿಗಬಹುದು ಎಲ್​​ಪಿಜಿ ಸಿಲಿಂಡರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿದ್ರೆ ಉಚಿತವಾಗಿ ಸಿಗಬಹುದು ಎಲ್​​ಪಿಜಿ ಸಿಲಿಂಡರ್​..!

ಈಗಿನ ಜಮಾನದಲ್ಲಿ ಎಲ್​​ಪಿಜಿ ಸಿಲಿಂಡರ್​ ಹೊಂದಿರದ ಅಡುಗೆ ಮನೆಗಳು ಕಾಣ ಸಿಗೋದು ತುಂಬಾ ಅಂದರೆ ತುಂಬಾನೇ ಅಪರೂಪ. ಎಲ್​ಪಿಜಿ ದರ ಎಷ್ಟೇ ಹೆಚ್ಚಾದರೂ ಸಹ ಇದನ್ನ ಬಳಕೆ ಮಾಡೋರ ಸಂಖ್ಯೆಯೇನು ಕಡಿಮೆಯಾಗಿಲ್ಲ.

ಈ ಎಲ್​ಪಿಜಿ ಸಿಲಿಂಡರ್​​ನ್ನು ಬುಕ್​ ಮಾಡಲು ಪೇಟಿಎಂ ಹೊಸ ಆಫರ್​ ಒಂದನ್ನ ನೀಡಿದ್ದು ಇದರನ್ವಯ ನಿಮ್ಮ ಅದೃಷ್ಟ ಚೆನ್ನಾಗಿದ್ರೆ ಸಿಲಿಂಡರ್​ ಉಚಿತವಾಗಿಯೇ ಸಿಗಬಹುದು.

ಎಲ್​ಪಿಜಿ ಸಿಲಿಂಡರ್​ ಪೇಟಿಎಂ ಮೂಲಕ ಬುಕ್​ ಮಾಡಿದವರಿಗೆ 700 ರೂಪಾಯಿಗಳವರೆಗೆ ಕ್ಯಾಶ್​ಬ್ಯಾಕ್​ ಸೌಕರ್ಯ ನೀಡಲಾಗ್ತಿದೆ. ಈ ಆಫರ್​ ಜನವರಿ 31ರವರೆಗೆ ಮಾತ್ರ ಲಭ್ಯವಿದೆ. ಮೊದಲ ಬಾರಿಗೆ ಪೇಟಿಎಂನಲ್ಲಿ ಎಲ್​.ಪಿ.ಜಿ. ಸಿಲಿಂಡರ್​ ಬುಕ್​ ಮಾಡುತ್ತಿರುವವರು ಈ ಕ್ಯಾಶ್​ಬ್ಯಾಕ್​ ಪಡೆಯಲಿದ್ದಾರೆ.

ಈ ಕ್ಯಾಶ್​​ಬ್ಯಾಕ್​ ಮೊತ್ತ ನೇರವಾಗಿ ನಿಮ್ಮ ಖಾತೆಗ ಜಮಾವಣೆಯಾಗಲಿದೆ. ಹೆಚ್​ಪಿ ಹಾಗೂ ಭಾರತ್​​ ಗ್ಯಾಸ್​ ಕಂಪನಿಗಳ ಸಿಲಿಂಡರ್​ಗೆ ಪೇಟಿಎಂ ಈ ಆಫರ್​ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...