alex Certify LPG ಸಿಲಿಂಡರ್ ಬಳಕೆದಾರರಿಗೆ ತಿಳಿದಿರಲಿ ಈ ಮುಖ್ಯ ಮಾಹಿತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

LPG ಸಿಲಿಂಡರ್ ಬಳಕೆದಾರರಿಗೆ ತಿಳಿದಿರಲಿ ಈ ಮುಖ್ಯ ಮಾಹಿತಿ…!

ಇಂದಿನ ದಿನಮಾನದಲ್ಲಿ ಬಹುತೇಕ ಮಂದಿ ಎಲ್‌ಪಿಜಿ ಸಿಲಿಂಡರ್ ಬಳಸುತ್ತಿದ್ದಾರೆ. ಹೀಗಿರುವಾಗ ಅನೇಕ ಒಳ್ಳೊಳ್ಳೆ ಯೋಜನೆಗಳನ್ನು ಗ್ರಾಹಕರಿಗಾಗಿ ಎಲ್‌ಪಿಜಿ ನೀಡಿದೆ. ಆದರೆ ಒಂದಿಷ್ಟು ಮಂದಿಗೆ ನೀಡುವ ಯೋಜನೆಗಳ ಬಗ್ಗೆ ತಿಳಿದಿಲ್ಲ. ಇದರಲ್ಲಿ ಎಲ್‌ಪಿಜಿ ವಿಮಾ ಪ್ರೀಮಿಯಂ ಕೂಡ ಒಂದು. ಹಾಗಾದರೆ ಏನಿದು ವಿಮಾ ಪ್ರೀಮಿಯಂ ಅಂತೀರಾ ಮುಂದೆ ನೋಡಿ.

ಎಲ್‌ಪಿಜಿ ಸಂಪರ್ಕವನ್ನು ತೆಗೆದುಕೊಳ್ಳುವಾಗ ಅಥವಾ ಎಲ್ಪಿಜಿಯಿಂದ ಗ್ರಾಹಕರಿಗೇನಾದರೂ ಅಪಘಾತವಾದಲ್ಲಿ, ಅನಿಲ ಸೋರಿಕೆಯಿಂದ ಸ್ಟೋಟ ಆಗಿದ್ದಲ್ಲಿ ಅಂತವರಿಗೆ 50 ಲಕ್ಷ ರೂಪಾಯಿಗಳವರೆಗೆ ಈ ವಿಮೆಯಲ್ಲಿ ಆರ್ಥಿಕ ಸಹಾಯ ನೀಡಲಾಗುತ್ತದೆ. ಈ ವಿಮೆಗಾಗಿ ಪೆಟ್ರೋಲಿಯಂ ಕಂಪನಿಗಳು ವಿಮಾ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಹೊಂದಿವೆ.

ಈ ವಿಮೆ ಲಾಭ ಪಡೆಯುವುದು ಹೇಗೆ ಎಂಬುದು ಕೂಡ ಇಲ್ಲಿ ಮುಖ್ಯ. ಇಂತಹ ಘಟನೆಗಳು ನಡೆದಾಗ ಮೊದಲು ಪೊಲೀಸ್ ಠಾಣೆಯಲ್ಲಿ ವರದಿ ನೀಡಬೇಕು. ಇದರ ನಂತರ ನೀವು ಇರುವ ಪ್ರದೇಶ ಅಧಿಕಾರಿ ಈ ಬಗ್ಗೆ ತನಿಖೆ ನಡೆಸುತ್ತಾರೆ. ಈ ದುರ್ಘಟನೆ ಎಲ್‌ಪಿಜಿಯಿಂದಲೇ ಆಗಿದ್ದಲ್ಲಿ ಆ ಅಧಿಕಾರಿ ಎಲ್‌ಪಿಜಿ ವಿತರಕ ಸಂಸ್ಥೆ, ಪ್ರದೇಶ ಕಚೇರಿ ವಿಮಾ ಕಂಪನಿಯ ಸ್ಥಳೀಯ ಕಚೇರಿಗೆ ಮಾಹಿತಿ ತಿಳಿಸುತ್ತಾರೆ. ನಂತರ ಗ್ರಾಹಕರು ಘಟನೆ ಸಂಬಂಧ ವಿಮಾ ಕಂಪನಿಗೆ ಹಕ್ಕು ಸಲ್ಲಿಸುತ್ತಾರೆ. ನಂತರ ಸಮೀಕ್ಷಾ ತಂಡ ಬಂದು ವೀಕ್ಷಣೆ ಮಾಡಿದ ನಂತರ ಹಣ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...