alex Certify ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮತ್ತಷ್ಟು ದುಬಾರಿಯಾಗಲಿದೆ ಮದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮತ್ತಷ್ಟು ದುಬಾರಿಯಾಗಲಿದೆ ಮದ್ಯ

ಬೆಂಗಳೂರು: ಆಂಧ್ರಪ್ರದೇಶ ಮತ್ತು ದೆಹಲಿ ಸರ್ಕಾರಗಳು ಅಬಕಾರಿ ತೆರಿಗೆ ಹೆಚ್ಚಳ ಮಾಡಿದ್ದು ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಅಬಕಾರಿ ಹೆಚ್ಚುವರಿ ತೆರಿಗೆ ಹಾಕಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ದೆಹಲಿ ಸರ್ಕಾರ ಶೇಕಡ 70ರಷ್ಟು ವಿಶೇಷ ಕೋರೋನಾ ತೆರಿಗೆ ಹಾಕಿದ್ದು ಆಂಧ್ರಪ್ರದೇಶ ಸರ್ಕಾರ ಕೂಡ ಶೇಕಡ 25 ಮತ್ತು ಶೇಕಡಾ 50 ರಷ್ಟು ತೆರಿಗೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿದೆ. ಅದೇ ರೀತಿ ರಾಜ್ಯದಲ್ಲಿಯೂ ಅಬಕಾರಿ ತೆರಿಗೆ ಹೆಚ್ಚಳಕ್ಕೆ ಸಲಹೆ ಬಂದಿದ್ದು ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎನ್ನಲಾಗಿದೆ.

ಕಳೆದ ಬಜೆಟ್ ನಲ್ಲಿ ಎಲ್ಲಾ 18 ಘೋಷಿತ ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 6ರಷ್ಟು ಹೆಚ್ಚಳ ಮಾಡಲಾಗಿದೆ. ಈಗ ಮತ್ತೆ ಶೇಕಡ 10 -15 ರಷ್ಟು ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳಕ್ಕೆ ಸಲಹೆ ಬಂದಿದ್ದು ಸರ್ಕಾರ ಇನ್ನೂ ದರ ಹೆಚ್ಚಳದ ಬಗ್ಗೆ ತೀರ್ಮಾನಿಸಿಲ್ಲ. ಒಂದು ವೇಳೆ ದರ ಹೆಚ್ಚಳವಾದಲ್ಲಿ ಮದ್ಯ ಮತ್ತಷ್ಟು ದುಬಾರಿಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...