alex Certify ಮನೆಯಲ್ಲೇ ಕುಳಿತು ರೇಷನ್ ಕಾರ್ಡ್ ‌ಗೆ ಲಿಂಕ್‌ ಮಾಡಿ ಆಧಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕುಳಿತು ರೇಷನ್ ಕಾರ್ಡ್ ‌ಗೆ ಲಿಂಕ್‌ ಮಾಡಿ ಆಧಾರ್

ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕು ಎಂದು ಹೇಳಿತ್ತಾದರೂ ಸರ್ವರ್ ಸಮಸ್ಯೆಗಳಿಂದಾಗಿ ಅನೇಕ ಮಂದಿ ಲಿಂಕ್ ಮಾಡಿರಲಿಲ್ಲ. ಅಷ್ಟೊತ್ತಿಗೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಲಿ‌ಂಕ್ ಮಾಡುವ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಆದರೆ ಲಾಕ್‌ಡೌನ್ ಸಮಯದಲ್ಲಿ ರೇಷನ್ ಕಾರ್ಡ್ ಹೊಂದಿರುವ ಹಾಗೂ ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಆಗದೇ ಇರುವವರಿಗೂ ಕೂಡ ಪಡಿತರವನ್ನು ನೀಡಿದೆ ಸರ್ಕಾರ.

ಇದೀಗ ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಸಮಯಾವಕಾಶವನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ. ಇನ್ನು ʼಒನ್‌ ನೇಷನ್‌ ಒನ್ ರೇಷನ್ʼ  ಜೂನ್‌ನಿಂದ ಆರಂಭವಾಗಲಿದೆ. ಇದರ ಜೊತೆಗೆ ಇದೀಗ ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಆಧಾರ್ ಕಾರ್ಡ್‌ನ್ನು ರೇಷನ್ ಕಾರ್ಡ್‌ಗೆ ಲಿಂಕ್ ಮಾಡಬಹುದಾಗಿದೆ.

ಆಧಾರ್ ಕಾರ್ಡ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಓಪನ್ ಮಾಡಿ, ಈಗ ಪ್ರಾರಂಭಿಸು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ಆಧಾರ್ ಕಾರ್ಡ್ ನಂಬರ್ ಸೇರಿದಂತೆ ಇತರೆ ಮಾಹಿತಿಯನ್ನು ಕೇಳುತ್ತದೆ. ಅದೆಲ್ಲಾ ಭರ್ತಿಯಾದ ನಂತರ ಪೋಸ್ಟ್ ಮಾಡಿದರೆ ಸಾಕು. ಯಶಸ್ವಿ ಪರಿಶೀಲನೆ ನಂತರ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್‌ಗೆ ಲಿಂಕ್ ಆಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...