alex Certify LIC ಪಾಲಿಸಿದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

LIC ಪಾಲಿಸಿದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಕೋವಿಡ್-19ನ ಎರಡನೇ ಅಲೆ ಎಬ್ಬಿಸಿರುವ ಅವಾಂತರ ಹಾಗೂ ಲಾಕ್‌ಡೌನ್‌ ಪರಿಸ್ಥಿತಿಗಳನ್ನು ಮನಗಂಡಿರುವ ಭಾರತೀಯ ಜೀವ ವಿಮಾ ನಿಗಮ ತನ್ನ ಗ್ರಾಹಕರಿಗೆ ವಿಮೆ ಸೆಟಲ್ ಮೆಂಟ್ ಪಡೆದುಕೊಳ್ಳುವುದನ್ನು ಇನ್ನಷ್ಟು ಸರಳೀಕೃತಗೊಳಿಸಿದೆ.

ವಿಮೆಗೆ ಒಳಪಟ್ಟ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟ ಸಂದರ್ಭದಲ್ಲಿ ಅವರ ಮರಣವನ್ನು ದೃಢೀಕರಿಸಲು ಪರ್ಯಾಯ ಸಾಕ್ಷಿಗಳನ್ನು ಕೊಡಲು ಎಲ್‌ಐಸಿ ಅನುಮತಿ ಕೊಟ್ಟಿದೆ. ನಗರಪಾಲಿಕೆ ವಿತರಿಸುವ ಮರಣ ಪ್ರಮಾಣ ಪತ್ರಗಳಲ್ಲದೇ, ಮರಣ ಪ್ರಮಾಣ ಪತ್ರ, ಆಸ್ಪತ್ರೆಗಳು ಕೊಡುವ ಬಿಡುಗಡೆ/ಮರಣದ ವಿವರ ಪತ್ರಗಳನ್ನು ಬಳಸಿಕೊಂಡು, ಅವುಗಳಿಗೆ ಎಲ್‌ಐಸಿಯ ಕ್ಲಾಸ್-1 ಅಧಿಕಾರಿಗಳು ಅಥವಾ 10 ವರ್ಷಗಳ ಅನುಭವವುಳ್ಳ ಅಭಿವೃದ್ಧಿ ಅಧಿಕಾರಿಗಳ ಸಹಿ ಇದ್ದಲ್ಲಿ ಅವುಗಳನ್ನೇ ಪರಿಗಣಿಸಲು ವಿಮಾ ಸಂಸ್ಥೆ ನಿರ್ಧರಿಸಿದೆ.

ವಿಮಾ ಹಣವನ್ನು ಪಡೆಯಲು ಮರಣ ದೃಢೀಕರಣದೊಂದಿಗೆ ಮೃತಪಟ್ಟ ವ್ಯಕ್ತಿಯ ಅಂತಿಮ ಸಂಸ್ಕಾರದ ಸಾಕ್ಷಿಯನ್ನೂ ಒದಗಿಸಬೇಕಾಗುತ್ತದೆ.

ವೈದ್ಯನ ಸೋಗಿನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಣ್ಣು, ಐಸ್ ಕ್ರೀಮ್ ಮಾರಾಟಗಾರ ಅರೆಸ್ಟ್

ಇದರೊಂದಿಗೆ ತನ್ನ ಗ್ರಾಹಕರಿಗೆ ಎಲ್‌ಐಸಿಯು ದಾಖಲೆಗಳನ್ನು ತಂದೊಪ್ಪಿಸಲೆಂದು ಹತ್ತಿರವಿರುವ ತನ್ನ ಶಾಖೆಗಳಲ್ಲೇ ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಕೋವಿಡ್-19 ನಡುವೆ ವಿಮೆ ಕ್ಲೇಮ್ ಮಾಡಬೇಕಾದ ಮಂದಿ ಬಹಳ ದೂರ ಹೋಗಬೇಕಾದ ಅಗತ್ಯವನ್ನು ತಪ್ಪಿಸಲಾಗಿದೆ.

ಈ ಸಂಬಂಧ ಎಲ್‌ಐಸಿ ತೆಗೆದುಕೊಂಡ ಇತರ ಕ್ರಮಗಳು

– ವಿಡಿಯೋ ಕರೆ ಮೂಲಕವೂ ನೀವು ಪ್ರಮಾಣಪತ್ರ ಪಡೆದುಕೊಳ್ಳಬಹುದಾಗಿದೆ.

– ಗ್ರಾಹಕರು ಆನ್ಲೈನ್ ಮೂಲಕ ನೆಫ್ಟ್ ದಾಖಲೆಗಳನ್ನು ಸೃಷ್ಟಿಸಬಹುದಾಗಿದೆ. ಗ್ರಾಹಕರ ಪೋರ್ಟಲ್ ಅಥವಾ ತ್ವರಿತ ಸೆಟಲ್‌ಮೆಂಟ್ ಮೂಲಕ ಗ್ರಾಹಕರು ತಮ್ಮ ದಾಖಲೆಗಳನ್ನು ಒದಗಿಸಬಹುದಾಗಿದೆ.

– ವಿಮಾ ಖರೀದಿದಾರರು ಎಲ್‌ಐಸಿಯ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಟ್ಟು, ಪ್ರೀಮಿಯಂ ಪಾವತಿ, ಪರಿಷ್ಕರಣೆ, ಸಾಲಕ್ಕೆ ಅರ್ಜಿ, ಸಾಲ ಮರುಪಾವತಿ, ಸಾಲದ ಮೇಲೆ ಬಡ್ಡಿ ಪಾವತಿ, ವಿಳಾಸದಲ್ಲಿ ಬದಲಾವಣೆ ಸೇರಿದಂತೆ ಇನ್ನಿತರ ಸೇವೆಗಳ ಕುರಿತಂತೆ ತಿಳಿದುಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...