alex Certify ʼಬ್ಯಾಂಕಿಂಗ್’‌ ವಹಿವಾಟು ವಿಫಲವಾದ ಸಂದರ್ಭದಲ್ಲಿ ನಿಮ್ಮ ಹಕ್ಕುಗಳ ಕುರಿತು ನಿಮಗಿದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬ್ಯಾಂಕಿಂಗ್’‌ ವಹಿವಾಟು ವಿಫಲವಾದ ಸಂದರ್ಭದಲ್ಲಿ ನಿಮ್ಮ ಹಕ್ಕುಗಳ ಕುರಿತು ನಿಮಗಿದು ತಿಳಿದಿರಲಿ

ಬ್ಯಾಂಕಿಂಗ್ ವ್ಯವಹಾರಗಳು ವಿಫಲವಾಗುವುದು ಸಾಮಾನ್ಯವಾದ ವಿಚಾರ. ಬಹಳಷ್ಟು ಕಾರಣಗಳಿಗೆ ವ್ಯವಹಾರಗಳು ವಿಫಲವಾಗಬಹುದು, ಕೆಲವೊಮ್ಮೆ ಗ್ರಾಹಕರ ಕಡೆಯಿಂದ, ಸಂಪರ್ಕದ ಕಡಿತದ ಕಾರಣದಿಂದ ಹೀಗೆ ಆಗಿರುತ್ತದೆ.

ಆದರೆ ಇಂಥ ಸಂದರ್ಭದಲ್ಲಿ ನಿಮ್ಮ ಖಾತೆಯಿಂದ ದುಡ್ಡು ಕಡಿತವಾಗಿದ್ದಲ್ಲಿ ಅದನ್ನು ಬ್ಯಾಂಕುಗಳು ಅಥವಾ ವಾಲೆಟ್ ಸೇವಾದಾರರು ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಅವಧಿಯೊಳಗೆ ನಿಮಗೆ ಹಿಂದಿರುಗಿಸಬೇಕು. ಒಂದು ವೇಳೆ ಸೇವಾದಾರರು ಈ ಕಾಲಾವಧಿಯೊಳಗೆ ನಿಮಗೆ ದುಡ್ಡು ಹಿಂದಿರುಗಿಸದೇ ಇದ್ದಲ್ಲಿ ನೀವು ಪರಿಹಾರ ಕೋರಬಹುದಾಗಿದೆ.

ದುಡ್ಡು ಕಳುಹಿಸಿದವರ ಖಾತೆಯಿಂದ ದುಡ್ಡು ಕಡಿತಗೊಂಡು ಆ ದುಡ್ಡು ಪಾವತಿಯಾಗಬೇಕಾದವರ ಖಾತೆಗೆ ಜಮಾ ಆಗಿಲ್ಲವಾದಲ್ಲಿ, ದಂಡವನ್ನು ಸ್ವೀಕರಿಸಬೇಕಾದ ಬ್ಯಾಂಕ್‌ ಮೇಲೆ ವಿಧಿಸಲಾಗುತ್ತದೆ. ಆದರೆ ಈ ಸಮಸ್ಯೆ ಏನಾದರೂ ಕಳುಹಿಸಬೇಕಾದ ಬ್ಯಾಂಕ್‌ನದ್ದಾದಲ್ಲಿ, ಪಾವತಿ ಮಾಡಿದ ವ್ಯಕ್ತಿ ಪರಿಹಾರದ ದುಡ್ಡು ಸ್ವೀಕರಿಸುತ್ತಾರೆ. ಬಹುತೇಕ ವ್ಯಹಾರಗಳಲ್ಲಿ ಇಂಥ ಪ್ರಮಾದಲ್ಲಿ 100 ರೂ.ಗಳ ಪರಿಹಾರ ಇರುತ್ತದೆ.

ಟೆಲಿ ಮಾರ್ಕೆಟಿಂಗ್​ ಕರೆಗಳಿಂದ ಬೇಸತ್ತಿದ್ದೀರಾ..? ಇಲ್ಲಿದೆ ಅದಕ್ಕೆ ಪರಿಹಾರ

1. ಗ್ರಾಹಕರ ಖಾತೆಯಿಂದ ದುಡ್ಡು ಕಡಿತವಾದ ಮೇಲೂ ಹೋಗಬೇಕಾದ ಕಡೆ ಹೋಗದೇ ಇದ್ದಲ್ಲಿ.

ಕಾಲಾವಧಿ: ಆ ಹಣವನ್ನು ಮುಂದಿನ ಐದು ಕೆಲಸದ ದಿನಗಳ ಒಳಗೆ ಹಿಂದಿರುಗಿಸದೇ ಇದ್ದಲ್ಲಿ ಬ್ಯಾಂಕು ದಂಡ ಕಟ್ಟಬೇಕಾಗುತ್ತದೆ.

ಕಾರ್ಡ್ ವ್ಯವಹಾರಗಳು

2. ಕಾರ್ಡ್‌ನಿಂದ ಕಾರ್ಡ್‌ಗೆ ವ್ಯವಹಾರ ಮಾಡುವಾಗ, ಖಾತೆಯಿಂದ ದುಡ್ಡು ಕಡಿತಗೊಂಡ ಬಳಿಕವೂ ಫಲಾನುಭವಿಯ ಖಾತೆಗೆ ಜಮಾ ಆಗದೇ ಇದ್ದಲ್ಲಿ.

ಕಾಲಾವಧಿ: ಸ್ವಯಂ ಹಿಂಪಡೆತವು ಎರಡು ಕೆಲಸದ ದಿನಗಳ ಒಳಗೆ ಆಗಬೇಕು.

3. ಅಂಗಡಿಗಳಲ್ಲಿ, ಪಾಯಿಂಟ್‌ ಆಫ್ ಸೇಲ್‌ ಯಂತ್ರದಲ್ಲಿ ಕಾರ್ಡ್‌ನಿಂದ ದುಡ್ಡು ಪಾವತಿ ಮಾಡಿದ ಮೇಲೂ ಈ ಬಗ್ಗೆ ಖಾತ್ರಿ ಇಲ್ಲದೇ ಇರುವುದು.

ಕಾಲಾವಧಿ: ಕಾರ್ಡ್‌ದಾರರ ಖಾತೆಗಳಿಗೆ ದುಡ್ಡು ಮುಂದಿನ ಐದು ಕೆಲಸದ ದಿನಗಳ ಒಳಗೆ ಮರಳಿ ಬರಬೇಕು.

ಆನ್ಲೈನ್ ವ್ಯವಹಾರಗಳು

4. ಐಎಂಪಿಎಸ್‌, ಯುಪಿಐ, ನೆಫ್ಟ್‌ ಅಥವಾ ಆರ್‌ಟಿಜಿಎಸ್ ಮೂಲಕ ಗ್ರಾಹಕರು ದುಡ್ಡು ಕಳುಹಿಸಿದರೂ ಫಲಾನುಭವಿ ದುಡ್ಡು ಸ್ವೀಕರಿಸದೇ ಇದ್ದಲ್ಲಿ.

ಕಾಲಾವಧಿ: ಕಡಿತಗೊಂಡ ಹಣ ಎರಡು ಕೆಲಸದ ದಿನಗಳ ಒಳಗೆ ಮರಳಬೇಕು. ಆದರೆ ಯುಪಿಐ ಪಾವತಿಯನ್ನು ಅಂಗಡಿಯೊಂದರಲ್ಲಿ ಮಾಡಿದಲ್ಲಿ, ಆರು ಕೆಲಸದ ದಿನಗಳ ಒಳಗೆ ಸೆಟಲ್‌ಮೆಂಟ್ ಆಗಬೇಕು, ಇಲ್ಲವಾದಲ್ಲಿ ಗ್ರಾಹಕರಿಗೆ ಪರಿಹಾರ ಕೊಡಬೇಕಾಗುತ್ತದೆ.

ವಾಲೆಟ್‌ಗಳು

5. ಗ್ರಾಹಕರು ದುಡ್ಡು ಕಳುಹಿಸಿದರೂ ಫಲಾನುಭವಿಗಳಿಗೆ ಅದು ತಲುಪದೇ ಇದ್ದಾಗ

ಕಾಲಾವಧಿ: ಮುಂದಿನ ಎರಡು ಕೆಲಸದ ದಿನಗಳ ಒಳಗೆ ಸೆಟಲ್‌ಮೆಂಟ್ ಆಗಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...