alex Certify ಗ್ರಾಹಕರಿಗೆ ಜಿಯೋ ಭರ್ಜರಿ ಸುದ್ದಿ: ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್, ಕೇವಲ 1999 ರೂ. ಪಾವತಿಸಿ ಫೋನ್ ಖರೀದಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಜಿಯೋ ಭರ್ಜರಿ ಸುದ್ದಿ: ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್, ಕೇವಲ 1999 ರೂ. ಪಾವತಿಸಿ ಫೋನ್ ಖರೀದಿಸಿ

ರಿಲಯನ್ಸ್ ಜಿಯೋ, ಗೂಗಲ್ ಜೊತೆಗೆ ಅಭಿವೃದ್ಧಿಪಡಿಸಿರುವ ಹೊಸ ಸ್ಮಾರ್ಟ್ಫೋನ್ ಬೆಲೆಗೆ 6499 ರೂಪಾಯಿ ನಿಗದಿಪಡಿಸಲಾಗಿದೆ.

1999 ರೂಪಾಯಿ ಪಾವತಿಸುವ ಮೂಲಕವೂ ಈ ಫೋನ್ ಖರೀದಿಸಬಹುದು. ಉಳಿದ ಮೊತ್ತವನ್ನು 18 ತಿಂಗಳು ಅಥವಾ 24 ತಿಂಗಳು ಕಂತುಗಳಲ್ಲಿ ಪಾವತಿ ಮಾಡಬಹುದಾಗಿದೆ. ಈ ಕಂತುಗಳ ಮೊತ್ತ ಗ್ರಾಹಕರು ಪ್ರತಿ ತಿಂಗಳು ತಮ್ಮ ಮೊಬೈಲ್ ಗೆ ರೀಚಾರ್ಜ್ ಮಾಡಿಸಿಕೊಳ್ಳಲು ಪಾವತಿ ಮಾಡಬೇಕಾದ ಮೊತ್ತವನ್ನು ಕೂಡ ಒಳಗೊಂಡಿರುತ್ತದೆ. ದೀಪಾವಳಿ ಹಬ್ಬದ ಹೊತ್ತಿಗೆ ಫೋನ್ ಮಾರಾಟಕ್ಕೆ ಸಿದ್ಧವಾಗಿದೆ. 24 ತಿಂಗಳಿಗೆ 300 ರೂ., 18 ತಿಂಗಳಿಗೆ 350 ರೂ. ಸೇರಿ ವಿವಿಧ ಮೊತ್ತದ ಕಂತುಗಳನ್ನು ಪಾವತಿಸಿ ಫೋನ್ ಖರೀದಿಸಲು ಅವಕಾಶವಿದೆ.

2ಜಿಬಿ RAM, 32 ಜಿಬಿ ಇಂಟರ್ನಲ್ ಮೇಮೋರಿ, ಕ್ವಾಲ್ಕಾಮ್ ಸ್ನ್ಯಾಪ್ ಡ್ರಾಗನ್ ಪ್ರೊಸೆಸರ್, ಇಂಟರ್ನಲ್ ಮೆಮೊರಿ 512 ಜಿಬಿ ವರೆಗೆ ವಿಸ್ತರಣೆ ಮಾಡುವ ಅವಕಾಶವಿದೆ. 5.45 ಇಂಚು ಸ್ಕ್ರೀನ್ ಹೊಂದಿದೆ. ಜಿಯೋಫೋನ್ ನೆಕ್ಸ್ಟ್ ಖರೀದಿಸುವ ಆಸಕ್ತಿದಾರರು ತಮ್ಮ ಸಮೀಪದ ಜಿಯೋ ಸ್ಮಾರ್ಟ್ ಡಿಜಿಟಲ್ ರಿಟೇಲರ್, jio.com/next ವೆಬ್ ಸೈಟ್ ನಲ್ಲಿ ಹೆಸರು ನೋಂದಾಯಿಸಬೇಕು. ಇಲ್ಲದಿದ್ದರೆ ವಾಟ್ಸಾಪ್ ಮೂಲಕ 70182 70182 ಸಂಖ್ಯೆಗೆ 111 ಎಂದು ಸಂದೇಶ ಕಳುಹಿಸಬಹುದು. ಜಿಯೋದಿಂದ ಪ್ರತಿಕ್ರಿಯೆ ಲಭ್ಯವಾದ ಬಳಿಕ ಸಮೀಪದ ಜಿಯೋ ಮಾರ್ಟ್ ರಿಟೇಲರ್ ಬಳಿ ಹೋಗಿ ಸ್ಮಾರ್ಟ್ ಫೋನ್ ಪಡೆಯಬಹುದು ಎಂದು ಹೇಳಲಾಗಿದೆ. ಬಳಕೆದಾರರಿಗೆ ಅನುಕೂಲವಾಗುವಂತೆ ಸ್ಥಳೀಯ ಭಾಷೆಯಲ್ಲಿಯನ್ನೂ ಫೋನ್ ಒಳಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...