alex Certify ಜಿಯೋ ನೀಡ್ತಿದೆ ಅಗ್ಗದ ಬೆಲೆಗೆ ಭರ್ಜರಿ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ನೀಡ್ತಿದೆ ಅಗ್ಗದ ಬೆಲೆಗೆ ಭರ್ಜರಿ ಡೇಟಾ

Jio-Vodafone-Airtel offers affordable know price and plan

ದೇಶದ ಮೂರು ಉನ್ನತ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ವೊಡಾಫೋನ್ ಮತ್ತು ಏರ್ಟೆಲ್ ಮಧ್ಯೆ ಸ್ಪರ್ಧೆಯಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡ್ತಿರುತ್ತವೆ. ಈಗ ಜಿಯೋ 329 ರೂಪಾಯಿಗಳ ಯೋಜನೆಯನ್ನು ಬಿಡುಗಡೆ ಮಾಡಿದೆ.

ರಿಲಯನ್ಸ್ ಜಿಯೋದ ಕೈಗೆಟುಕುವ ಯೋಜನೆ ಇದಾಗಿದೆ. ಜಿಯೋದ 329 ರೂಪಾಯಿ ಈ ಯೋಜನೆಯಲ್ಲಿ 6 ಜಿಬಿ ಡೇಟಾವನ್ನು 84 ದಿನಗಳ ಮಾನ್ಯತೆಯೊಂದಿಗೆ ನೀಡಲಾಗುತ್ತಿದೆ. ಇದಕ್ಕೆ ದೈನಂದಿನ ಮಿತಿಯಿಲ್ಲ. ಬಳಕೆದಾರರು ಒಂದು ದಿನದಲ್ಲಿ ಎಷ್ಟು ಡೇಟಾ ಬೇಕಾದ್ರೂ ಬಳಸಬಹುದು.

ಈ ಯೋಜನೆಯಡಿ ಗ್ರಾಹಕರು ಜಿಯೋ ಟು ಜಿಯೋ ಅನಿಯಮಿತ ಕರೆ ಮಾಡಬಹುದು. ಇತರ ನೆಟ್‌ವರ್ಕ್‌ಗಳಿಗೆ ಕರೆ ಮಾಡಲು 3 ಸಾವಿರ ನಿಮಿಷಗಳನ್ನು ನೀಡಲಾಗ್ತಿದೆ. 1000 ಎಸ್‌ಎಂಎಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ.

ವೊಡಾಫೋನ್ ಮತ್ತು ಏರ್ಟೆಲ್ 329ರ ಬದಲು 379 ರೂಪಾಯಿ ಯೋಜನೆ ನೀಡ್ತಿದೆ. ಯೋಜನೆಯಲ್ಲಿ  ಅನಿಯಮಿತ ಕರೆ, 6 ಜಿಬಿ ಡೇಟಾ ಮತ್ತು 84 ದಿನಗಳ ಮಾನ್ಯತೆ ಸಿಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...