alex Certify ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಹೊಸ ವರ್ಷದಿಂದ ಉಚಿತವಾಗಲಿದೆ ಈ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಹೊಸ ವರ್ಷದಿಂದ ಉಚಿತವಾಗಲಿದೆ ಈ ಸೇವೆ

ಟೆಲಿಕಾಂ ಲೋಕದ ದೈತ್ಯ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಮತ್ತೊಮ್ಮೆ ಬೇರೆ ನೆಟ್​ವರ್ಕ್​ನ ಕರೆಗಳಿಗೂ ಶುಲ್ಕ ವಿಧಿಸುವುದನ್ನ ನಿಲ್ಲಿಸಲಿದೆ.

ಜನವರಿ 1ರಿಂದ ಈ ಹೊಸ ಕ್ರಮ ಜಾರಿಗೆ ಬರಲಿದೆ. ಟೆಲಿಕಾಂ ರೆಗ್ಯೂಲಾರಿಟಿ ಅಥಾರಿಟಿ ಆಫ್​ ಇಂಡಿಯಾ ಐಯುಸಿ ಶುಲ್ಕವನ್ನ ರದ್ದುಗೊಳಿಸಿದ ಹಿನ್ನೆಲೆ ಜಿಯೋ ಎಲ್ಲಾ ದೇಶಿ ನೆಟ್​​ವರ್ಕ್​ಗಳ ಕರೆಗೆ ವಿಧಿಸಲಾಗುತ್ತಿದ್ದ ಐಯುಸಿ ಶುಲ್ಕವನ್ನ ಕೊನೆಗೊಳಿಸಲಿದೆ.

ಈ ಹೊಸ ಕ್ರಮದಿಂದ ಜಿಯೋ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಯಾವುದೇ ನೆಟ್​ವರ್ಕ್​ಗೆ ಉಚಿತ ಕರೆ ಸೌಲಭ್ಯವನ್ನ ನೀಡಿದೆ. ಜಿಯೋದಿಂದ ಜಿಯೋಗೆ ಉಚಿತ ಕರೆ ಮೊದಲಿನಿಂದಲೂ ಇದೆ. ಇದೀಗ ಅನ್ಯ ನೆಟ್ವರ್ಕ್ ಕರೆ ಉಚಿತವಾಗಿರಲಿದೆ ಎಂದು ಜಿಯೋ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಸೆಪ್ಟೆಂಬರ್​ 19ರಂದು ಜಿಯೋ ಕಂಪನಿ ಬೇರೆ ನೆಟ್​ವರ್ಕ್​ಗೆ ಕರೆ ಮಾಡಿದರೆ ಅಂತಹ ಕರೆಗೆ ದರ ವಿಧಿಸೋದು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿತ್ತು. ಆದರೆ ಇದೀಗ ತನ್ನ ನಿರ್ಧಾರವನ್ನ ಜಿಯೋ ಬದಲಾಯಿಸಿದೆ.

ಡಿಜಿಟಲ್​ ಇಂಡಿಯಾ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿರುವ ಜಿಯೋ ಕಂಪನಿ ಪ್ರತಿಯೊಬ್ಬರಿಗೂ ಕಡಿಮೆ ದರದಲ್ಲಿ ಗುಣಮಟ್ಟದ ಸೇವೆಯನ್ನ ನೀಡಲು ಶ್ರಮಿಸುತ್ತಿದೆ. ಸಾಕಷ್ಟು ಆಫರ್​ಗಳನ್ನ ನೀಡುವ ಮೂಲಕ ಜಿಯೋ ಗ್ರಾಹಕ ಸ್ನೇಹಿ ಟೆಲಿಕಾಂ ಕಂಪನಿಯಾಗಿ ಮುಂದುವರಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...