alex Certify ರಿಲಯನ್ಸ್ ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲಯನ್ಸ್ ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

2021 ರ ದ್ವಿತೀಯಾರ್ಧದಲ್ಲಿ ಜಿಯೋ 5 ಜಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ರಿಲಯನ್ಸ್​ ಇಂಡಸ್ಟ್ರಿಯಲ್​​ ಚೇರ್​ಮನ್​ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಹೇಳಿದ್ದಾರೆ.

ಇಂಡಿಯಾ ಮೊಬೈಲ್​ ಕಾಂಗ್ರೆಸ್​ 2020ರನ್ನ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ 5 ಜಿ ಆಗಮನದಿಂದ ಪ್ರಧಾನಿ ಮೋದಿಯವರ ಡಿಜಿಟಲ್​ ಇಂಡಿಯಾ ಕಲ್ಪನೆಗೆ ರಿಲಯನ್ಸ್​ ಜಿಯೋದ ಈ ಪ್ರಯತ್ನ ಇನ್ನಷ್ಟು ಬಲ ತುಂಬಲಿದೆ ಎಂದು ಹೇಳಿದ್ದಾರೆ.

ಜಿಯೋ 5 ಜಿಯನ್ನ ಭಾರತದಲ್ಲಿ 2020ರಲ್ಲಿ ಔಪಚಾರಿಕವಾಗಿ ರಿಲಯನ್ಸ್​ ಇಂಡಸ್ಟ್ರಿಯಲ್​ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಲಾಗಿದೆ.

ಆದರೆ 2021 ರ ಅಂತ್ಯದ ವೇಳೆಗೆ ಪ್ರತಿಯೊಬ್ಬ ಜಿಯೋ ಗ್ರಾಹಕನಿಗೂ 5 ಜಿ ನೆಟ್​ ವರ್ಕ್​ ಸಿಗಲಿದೆ. ಈ ಮೂಲಕ ರಿಲಯನ್ಸ್ ಜಿಯೋ ಭಾರತದಲ್ಲಿ ಡಿಜಿಟಲ್​ ರೂಪಾಂತರಕ್ಕೆ ಶಾಶ್ವತ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.

ಭಾರತವು ವಿಶ್ವದ ಅತ್ಯುತ್ತಮ ಡಿಜಿಟಲ್​ ಸಂಪರ್ಕ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಮುನ್ನಡೆಯನ್ನ ಕಾಯ್ದುಕೊಳ್ಳುವ ಸಲುವಾಗಿ 5 ಜಿ ಆರಂಭಿಕ ರೋಲ್​ ಔಟ್​ನ್ನ ವೇಗಗೊಳಿಸಲು ಕೆಲ ಕ್ರಮಗಳನ್ನ ಕೈಗೊಳ್ಳಬೇಕಾಗುತ್ತೆ. ರಿಲಯನ್ಸ್ ಜಿಯೋ 5ಜಿ ನೆಟ್​ವರ್ಕ್​ನೊಂದಿಗೆ 2021ರಲ್ಲಿ ನಾವು ಡಿಜಿಟಲ್​ ಲೋಕದಲ್ಲಿ ಹೊಸ ಕ್ರಾಂತಿ ಮಾಡಲಿದ್ದೇವೆ ಅಂತಾ ಮುಖೇಶ್​ ಅಂಬಾನಿ ಭರವಸೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...