alex Certify ಜಿಯೋ ಅಗ್ಗದ ಆಫರ್: 11 ರೂ.ರಿಚಾರ್ಜ್ ಮಾಡಿದ್ರೆ ಸಿಗಲಿದೆ ಡಬಲ್ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಅಗ್ಗದ ಆಫರ್: 11 ರೂ.ರಿಚಾರ್ಜ್ ಮಾಡಿದ್ರೆ ಸಿಗಲಿದೆ ಡಬಲ್ ಡೇಟಾ

ಕೊರೊನಾ ವೈರಸ್ ನಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ  ಮೊಬೈಲ್ ಡೇಟಾ ಬಳಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡ ರಿಲಯನ್ಸ್ ಜಿಯೋ 4 ಜಿ ಡೇಟಾ ವೋಚರ್ ‌ಗಳಲ್ಲಿ ಬದಲಾವಣೆ ಮಾಡಿದೆ.

ಈ ಅಗ್ಗದ ಡೇಟಾ ಚೀಟಿಯಲ್ಲಿ ಲಭ್ಯವಿರುವ ಪ್ರಯೋಜನಗಳನ್ನು ಕಂಪನಿಯು ದ್ವಿಗುಣಗೊಳಿಸಿದೆ. ಜಿಯೋದ 4 ಜಿ ಡಾಟಾ ಚೀಟಿಯಲ್ಲಿ ಅತ್ಯಂತ ಕಡಿಮೆ ಬೆಲೆಯ ಅನೇಕ ರೀಚಾರ್ಜ್ ಯೋಜನೆಗಳಿವೆ. ಇದರಲ್ಲಿ 11 ರೂಪಾಯಿ, 21 ರೂಪಾಯಿ, 51 ರೂಪಾಯಿ ಮತ್ತು 101 ರೂಪಾಯಿಗಳ ಯೋಜನೆಯಾಗಿದೆ.

ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ 11 ರೂಪಾಯಿಯಲ್ಲಿ 400 ಎಂಬಿ ಬದಲು 800 ಎಂಬಿ ಡೇಟಾ ಲಭ್ಯವಾಗ್ತಿದೆ. ಇದಲ್ಲದೆ ಕರೆಗೆ 75 ನಿಮಿಷಗಳನ್ನು ಸಹ ನೀಡಲಾಗ್ತಿದೆ. ಇದನ್ನು ಜಿಯೋದಿಂದ ನಾನ್ ಜಿಯೋಗೆ ಬಳಸಬಹುದು.

ಇನ್ನು ಜಿಯೋನ ಅಗ್ಗದ ಯೋಜನೆ 129 ರೂಪಾಯಿ ಯೋಜನೆಯಲ್ಲಿ 28 ದಿನಗಳ ಸಿಂಧುತ್ವ ಸಿಗಲಿದೆ.  ಗ್ರಾಹಕರು ಕೇವಲ 129 ರೂಪಾಯಿ ರೀಚಾರ್ಜ್ ಮಾಡುವ ಮೂಲಕ ಒಟ್ಟು 2 ಜಿಬಿ ಲಾಭ ಪಡೆಯಬಹುದು. Jio.com ನಲ್ಲಿ ಇದ್ರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...