alex Certify ʼವರ್ಕ್​ ಫ್ರಂ ಹೋಂʼಗೆಂದೇ ವಿನ್ಯಾಸವಾಯ್ತು ಹೊಸ ಪೈಜಾಮಾ​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವರ್ಕ್​ ಫ್ರಂ ಹೋಂʼಗೆಂದೇ ವಿನ್ಯಾಸವಾಯ್ತು ಹೊಸ ಪೈಜಾಮಾ​..!

ಕೊರೊನಾದಿಂದಾಗಿ ಸಾಮಾನ್ಯವಾಗಿ ಎಲ್ಲ ಐಟಿ ಕಂಪನಿಗಳು ವರ್ಕ್​ ಫ್ರಂ​ ಹೋಂ ಮೂಲಕವೇ ಕೆಲಸವನ್ನ ನಡೆಸುತ್ತಿವೆ. ವರ್ಕ್ ಫ್ರಾ ಹೋಂ ಮಾಡುವಾಗ ಜೂಮ್​ ಮೀಟಿಂಗ್​​ಗೆ ಹಾಜರಾಗಬೇಕಾಗುತ್ತದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಈ ಮೀಟಿಂಗ್​ಗೆ ನೀವು ಮನೆಯಲ್ಲಿ ಹಾಕುವ ಪೈಜಾಮಾ ಮೂಲಕವೇ ಚೆನ್ನಾಗಿ ಕಾಣಿಸಲು ಬಯಸುವವರು ನೀವಾಗಿದ್ದರೆ ಜಪಾನ್​ ಮೂಲದ ಕಂಪನಿ ತಯಾರಿಸಿರುವ ಪೈಜಾಮಾ ಸೂಟ್​ ನಿಮಗೆ ಹೆಚ್ಚು ಉಪಯುಕ್ತವಾಗಲಿದೆ.

ಜಪಾನ್​ ಮೂಲದ ಕಂಪನಿ ತಯಾರಿಸಿರುವ ಈ ಪೈಜಾಮಾ ಸೂಟ್​ ನೋಡೋಕೆ ಥೇಟ್​​ ಆಫೀಸ್​ಗೆ ಹಾಕುವಂತಹ ಡ್ರೆಸ್​ನಂತೆಯೇ ಕಾಣುತ್ತದೆ. ಕಪ್ಪು, ಬಿಳಿ ಹಾಗೂ ಬೂದು ಬಣ್ಣದಲ್ಲಿ ಮಹಿಳೆ ಹಾಗೂ ಪುರುಷರಿಗಾಗಿ ಪೈಜಾಮಾವನ್ನ ಸಿದ್ಧಪಡಿಸಲಾಗಿದೆ. 3,545.38 ರೂಪಾಯಿ ಪಾವತಿಸಿ ಆನ್​ಲೈನ್​ನಲ್ಲಿ ನೀವು ಈ ಧಿರಿಸನ್ನ ಖರೀದಿ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...