alex Certify ಮತ್ತೆ ಸದ್ದು ಮಾಡುತ್ತಿದೆ ಆರ್ಕುಟ್‌: ಯಾಕೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಸದ್ದು ಮಾಡುತ್ತಿದೆ ಆರ್ಕುಟ್‌: ಯಾಕೆ ಗೊತ್ತಾ…?

ಈ ಫೇಸ್ಬುಕ್‌ ಎಲ್ಲಾ ಬರುವ ಮುನ್ನ ಸಾಮಾಜಿಕ ಜಾಲತಾಣಗಳ ಕಲ್ಪನೆ ಇನ್ನೂ ಆಗಷ್ಟೇ ಅಲ್ಲಲ್ಲಿ ಕೇಳಿ ಬರುತ್ತಿತ್ತು. ಆ ದಿನಗಳಲ್ಲಿ ಇಂಟರ್ನೆಟ್ ಬ್ರೌಸ್ ಮಾಡಲು ನಗರಗಳಲ್ಲಿರುವ ಹುಡುಗರು ಸೈಬರ್‌ ಕೆಫೆಗಳಿಗೆ ಎಡತಾಕುತ್ತಿದ್ದರು.

ಆ ಸಮಯದಲ್ಲಿ ಆರ್ಕುಟ್‌ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು, ಸಂದೇಶಗಳನ್ನು ಶೇರ್‌ ಮಾಡಿಕೊಳ್ಳುವ ಅಭ್ಯಾಸ ರೂಢಿಯಲ್ಲಿ ಇತ್ತು. ಆದರೆ ಮುಂದಿನ ದಿನಗಳಲ್ಲಿ ಫೇಸ್ಬುಕ್‌ ಹಾಗೂ ಟ್ವಿಟರ್‌ಗಳು ಬಂದ ಬಳಿಕ ಆರ್ಕುಟ್‌ ಹಾಗೂ Hi5ಗಳನ್ನು ಜನ ಮರೆತೇಬಿಟ್ಟರು.

ಈ ಕಾರಣದಿಂದ ಜುಲೈ 5, 2014ರಲ್ಲಿ ತನ್ನ ಬಳಕೆದಾರರಿಗೆ ಅಂತಿಮವಾಗಿ ಒಂದೊಂದು ಫೇರ್‌ವೆಲ್ ಸಂದೇಶಗಳನ್ನು ಆರ್ಕುಟ್ ಕಳುಹಿಸಿ, ತಾನು ಬದಿಗೆ ಸರಿಯುವುದಾಗಿ ಹೇಳಿತ್ತು. ಇದೀಗ ಆರ್ಕುಟ್ ನೆನಪಿನಲ್ಲಿ ಟ್ವಿಟ್ಟಿಗರು ತಮ್ಮ ಇನ್‌ಬಾಕ್ಸ್‌ಗಳಿಗೆ ಬಂದಿದ್ದ ಆ ಫೇರ್‌ವೆಲ್ ಸಂದೇಶವನ್ನು ಶೇ‌ರ್‌ ಮಾಡಿಕೊಂಡು ಆರ್ಕುಟ್‌ನಲ್ಲಿ ತಾವು ಕಳೆದ ಮೆಚ್ಚಿನ ಕ್ಷಣಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...