alex Certify BREAKING NEWS: ಬಿಗ್ ಶಾಕ್ ಬೆನ್ನಲ್ಲೇ ಸಣ್ಣ ಉಳಿತಾಯ ಖಾತೆದಾರರಿಗೆ ಭರ್ಜರಿ ‘ಗುಡ್ ನ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಬಿಗ್ ಶಾಕ್ ಬೆನ್ನಲ್ಲೇ ಸಣ್ಣ ಉಳಿತಾಯ ಖಾತೆದಾರರಿಗೆ ಭರ್ಜರಿ ‘ಗುಡ್ ನ್ಯೂಸ್’

ನವದೆಹಲಿ: ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಕಡಿತ ಮಾಡಲಾಗಿದ್ದ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡಿದೆ.

ಏಪ್ರಿಲ್ 1 ರಿಂದ ಜೂನ್ 30 ರ ವರೆಗಿನ ಅವಧಿಯಲ್ಲಿ ಬಡ್ಡಿದ ಪರಿಷ್ಕೃರಣೆ ಮಾಡಲಾಗಿದ್ದು, ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿತ್ತು. ಕಳೆದ 46 ವರ್ಷಗಳಲ್ಲೇ ಕನಿಷ್ಠ ಬಡ್ಡಿದರದಿಂದಾಗಿ ಸಣ್ಣ ಉಳಿತಾಯ ಯೋಜನೆಗೆ ಪೆಟ್ಟು ಬಿದ್ದಿತ್ತು.

ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದೇಶ ವಾಪಸ್ ಪಡೆದಿರುವುದಾಗಿ ತಿಳಿಸಿದ್ದಾರೆ.

ಬಡ್ಡಿದರ ಪರಿಷ್ಕರಿಸಿದ್ದ ಆದೇಶವನ್ನು ಹಿಂಪಡೆಯಲಾಗಿದ್ದು, ಹಿಂದಿನ ದರಗಳೇ ಮುಂದುವರೆಯಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಉಳಿತಾಯ ಠೇವಣಿ ಬಡ್ಡಿದರ ಶೇಕಡ 4 ರಿಂದ 3.5 ರಷ್ಟು

ಒಂದು ವರ್ಷದ ಠೇವಣಿ ಶೇಕಡ 5.5 ರಿಂದ 4.4

2 ವರ್ಷದ ಠೇವಣಿ ಶೇಕಡ 5.5 ರಿಂದ ಶೇಕಡ 5

3 ವರ್ಷದ ಠೇವಣಿ ಶೇಕಡ 5.5 ರಿಂದ ಶೇಕಡ 5.1

5 ವರ್ಷದ ಠೇವಣಿ ಶೇಕಡ 6.7 ರಿಂದ ಶೇಕಡ 5.8

5 ವರ್ಷದ ಆರ್.ಡಿ. ಶೇಕಡ 5.8 ರಿಂದ ಶೇಕಡ 5.3

ಹಿರಿಯ ನಾಗರಿಕರ ಉಳಿತಾಯ ಯೋಜನೆ ಶೇಕಡ 7.4 ರಿಂದ ಶೇಕಡ 6.5

ಮಾಸಿಕ ಆದಾಯ ಖಾತೆ ಶೇಕಡ 6.6 ರಿಂದ ಶೇಕಡ 5.7

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಶೇಕಡ 6.8 ರಿಂದ ಶೇಕಡ 5.9

ಪಿಪಿಎಫ್ ಯೋಜನೆ ಶೇಕಡ 7.1 ರಿಂದ ಶೇಕಡ 6.4

ಕಿಸಾನ್ ವಿಕಾಸ ಪತ್ರ ಶೇಕಡ 6.9 ರಿಂದ ಶೇಕಡ 6.2 ರಷ್ಟುಇಳಿಕೆಯಾಗಿ, 124 ತಿಂಗಳ ಬದಲಿಗೆ 138 ತಿಂಗಳಿಗೆ ಹೆಚ್ಚಳ ಮಾಡಲಾಗಿತ್ತು.

ಸುಕನ್ಯಾ ಸಮೃದ್ಧಿ ಯೋಜನೆ ಶೇಕಡ 7.6 ರಿಂದ ಶೇಕಡ 6.9 ರಷ್ಟು ಇಳಿಕೆ ಮಾಡಲಾಗಿತ್ತು.

ಆದರೆ, ಹಿಂದಿನ ಬಡ್ಡಿದರಗಳು ಮುಂದುವರೆಯಲಿವೆ ಎಂದು ಮಾಹಿತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...