alex Certify ಹಸುವಿನ ಸಗಣಿಯಿಂದ ತಯಾರಾಗಿದೆ ಪರಿಸರ ಸ್ನೇಹಿ ಪೇಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸುವಿನ ಸಗಣಿಯಿಂದ ತಯಾರಾಗಿದೆ ಪರಿಸರ ಸ್ನೇಹಿ ಪೇಂಟ್

ಹಸುವಿನ ಸಗಣಿಯಿಂದ ಹೊಸ ರೀತಿ ಪೇಂಟ್ ಅನ್ನು ತಯಾರಿಸುವ ಆವಿಷ್ಕಾರೀ ಸುದ್ದಿಯೊಂದು ಸದ್ದು ಮಾಡುತ್ತಿದೆ.

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ದೇಶದಲ್ಲೇ ಮೊದಲ ಬಾರಿಗೆ ಇಂಥ ಒಂದು ಪೇಂಟ್ ‌ಅನ್ನು ಜನವರಿ 12ರಂದು ಲಾಂಚ್‌ ಮಾಡಿದ್ದಾರೆ. ಈ ಪೇಂಟ್ ‌ಅನ್ನು ಖಾದಿ ಹಾಗೂ ಗ್ರಾಮೋದ್ಯೋಗ ಉದ್ಯೋಗಗಳ ಸಮಿತಿ ಅಭಿವೃದ್ಧಿಪಡಿಸಿದೆ.

’ಖಾದಿ ಪ್ರಾಕೃತಿಕ ಪೇಂಟ್’ ಎಂದು ಕರೆಯಲಾಗುವ ಮೊಟ್ಟ ಮೊದಲ ರೀತಿಯ ಈ ಪೇಂಟ್‌ ಪರಿಸರ ಸ್ನೇಹಿ ಹಾಗೂ ಟಾಕ್ಸಿಕ್ ರಹಿತವಾಗಿರುವುದಲ್ಲದೇ ಯಾವುದೇ ಫಂಗಸ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಈ ಪೇಂಟ್‌ ಕೈಗೆಟುಕುವ ದರದಲ್ಲಿ ಸಿಗಲಿದ್ದು, ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸನಿಂದ ಪ್ರಮಾಣೀಕೃತವಾಗಿದೆ.

ಡಿಸ್ಟಂಪರ್‌ ಹಾಗೂ ಪ್ಲಾಸ್ಟಿಕ್ ಎಮಲ್ಶನ್‌ಗಳ ರೂಪದಲ್ಲಿ ಈ ಖಾದಿ ಪ್ರಾಕೃತಿಕ ಪೇಂಟ್ ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...