alex Certify ಪ್ರಯಾಣಿಕರಿಗೆ ರೈಲ್ವೆಯಿಂದ ಮತ್ತೊಂದು ಗುಡ್ ನ್ಯೂಸ್: ರದ್ದಾದ ರೈಲುಗಳ ಟಿಕೆಟ್ ಮರುಪಾವತಿ ಅವಧಿ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ರೈಲ್ವೆಯಿಂದ ಮತ್ತೊಂದು ಗುಡ್ ನ್ಯೂಸ್: ರದ್ದಾದ ರೈಲುಗಳ ಟಿಕೆಟ್ ಮರುಪಾವತಿ ಅವಧಿ ವಿಸ್ತರಣೆ

ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ ಕೌಂಟರ್​​ ಟಿಕೆಟ್​ಗಳನ್ನ ರದ್ದುಗೊಳಿಸಲು ಹಾಗೂ ಮೀಸಲಾತಿ ಕೌಂಟರ್​​ಗಳಲ್ಲಿ ಶುಲ್ಕ ಮರುಪಾವತಿ ಪಡೆಯಲು ಭಾರತೀಯ ರೈಲ್ವೇ ಇಲಾಖೆ ಈವರೆಗೆ ಇದ್ದ ಆರು ತಿಂಗಳ ಅವಧಿಯನ್ನ ಒಂಬತ್ತು ತಿಂಗಳಿಗೆ ವಿಸ್ತರಿಸಿದೆ.

ಈ ಹೊಸ ತಿದ್ದುಪಡಿ ಭಾರತೀಯ ರೈಲ್ವೆ ಇಲಾಖೆ ರದ್ದು ಮಾಡಿದ ಸಾಮಾನ್ಯ ವೇಳಾಪಟ್ಟಿಯ ರೈಲೆಗಳಿಗೆ ಮಾತ್ರ ಅನ್ವಯಿಸುತ್ತೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಒಂದು ವೇಳೆ 139 ಅಥವಾ ಐಆರ್​ಸಿಟಿಸಿ ವೆಬ್​ಸೈಟ್​ ಮೂಲಕ ಕಳೆದ ವರ್ಷದ ಮಾರ್ಚ್ 21ರಿಂದ ಜುಲೈ 31ರೊಳಗಿನ ರದ್ದಾದ ರೈಲುಗಳ ಟಿಕೆಟ್​ಗಳನ್ನ ಸರೆಂಡರ್​ ಮಾಡಿದ್ದರೆ ಹಣ ಮರುಪಾವತಿಯಾಗಲಿದೆ.
ಈ ಹಿಂದೆ ಕೊರೊನಾ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕ್ಕೊಂಡು ಟಿಕೆಟ್​ ರದ್ದತಿ ಹಾಗೂ ಶುಲ್ಕ ಮರುಪಾವತಿ ವಿಚಾರವಾಗಿ ಮಾರ್ಗಸೂಚಿ ನೀಡಲಾಗಿತ್ತು. ಇದೀಗ ಭಾರತೀಯ ರೈಲ್ವೆ ಇಲಾಖೆ ಈ ಮಿತಿಯನ್ನ ವಿಸ್ತರಣೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...