alex Certify ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿ ಇಲ್ಲಿದೆ. ಈ ಬಾರಿ ಕೂಡ ಖಾಸಗಿ ಉದ್ಯೋಗಿಗಳಿಗೆ ವೇತನ ಹೆಚ್ಚಳ ಸಾಧ್ಯತೆ ಇಲ್ಲವಾಗಿದೆ.

ಬಹುತೇಕ ಕಂಪನಿಗಳು ಆರ್ಥಿಕ ಸಂಕಷ್ಟದಲ್ಲಿ ಇರುವುದರಿಂದ ಉದ್ಯೋಗಿಗಳ ವೇತನ ಹೆಚ್ಚಳ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕೊರೋನಾ ಪರಿಣಾಮ ಕಂಪನಿಗಳು ಆರ್ಥಿಕ ಸಂಕಷ್ಟದಲ್ಲಿವೆ. ಹೆಚ್ಚಿನ ಕಂಪನಿಗಳು ಉದ್ಯೋಗಿಗಳ ವೇತನ ಹೆಚ್ಚಳ ಮಾಡುವಷ್ಟು ಸಮರ್ಥವಾಗಿಲ್ಲ. ಹೆಚ್ಚಿನ ಕಂಪನಿಗಳ ಆದಾಯಕ್ಕೆ ಹೊಡೆತ ಬಿದ್ದಿದ್ದು, ಲೆಕ್ಕಾಚಾರ ತಲೆಕೆಳಗಾಗಿದೆ. ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡಲಾಗಿದ್ದು, ಉದ್ಯೋಗಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದು ಹೇಳಲಾಗಿದೆ.

2018 -19 ರಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಶೇಕಡ 15 ರಿಂದ ಶೇಕಡ 18ರಷ್ಟು ಹೆಚ್ಚಿಗೆ ವೇತನ ಸಿಗುತ್ತಿತ್ತು. ಆದರೆ, ಕೊರೋನಾದಿಂದ ಆರ್ಥಿಕ ಸಂಕಷ್ಟದ ಕಾರಣ 2021 ರಲ್ಲಿ ಶೇಕಡ 8 ರಿಂದ 9 ರಷ್ಟು ಮಾತ್ರ ವೇತನ ಹೆಚ್ಚಳವಾಗಬಹುದು. ಭಾರತದಲ್ಲಿ ಇದರ ಪ್ರಮಾಣ ಶೇಕಡ 7.7 ರಷ್ಟು ಇರಲಿದೆ ಎನ್ನಲಾಗಿದೆ.

ಕಂಪನಿಗಳು ಉದ್ಯೋಗಿಗಳ ವೇತನ ಹೆಚ್ಚಳ ಉದ್ದೇಶ ಹೊಂದಿದ್ದರೂ ಆರ್ಥಿಕ ಸಂಕಷ್ಟದ ಕಾರಣ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಾಗುವುದಿಲ್ಲ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...