alex Certify ಕೊರೋನಾ ತಡೆಗೆ ಮತ್ತೊಂದು ಮಹತ್ವದ ಆದೇಶ: ಜೀವರಕ್ಷಕ ರೆಮ್ ಡೆಸಿವಿರ್ ಆಮದು ಸುಂಕ ತೆರವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ತಡೆಗೆ ಮತ್ತೊಂದು ಮಹತ್ವದ ಆದೇಶ: ಜೀವರಕ್ಷಕ ರೆಮ್ ಡೆಸಿವಿರ್ ಆಮದು ಸುಂಕ ತೆರವು

ನವದೆಹಲಿ: ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಕ್ರಮಕೈಗೊಂಡಿರುವ ಸರ್ಕಾರ ಸೋಂಕಿತರಿಗೆ ಜೀವರಕ್ಷಕ ಎಂದೇ ಹೇಳಲಾಗುವ ರೆಮ್ ಡೆಸಿವಿರ್ ಔಷಧ ಮೇಲಿನ ಆಮದು ಸುಂಕವನ್ನು ತೆರವುಗೊಳಿಸಿದೆ.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಂಟಿ ವೈರಸ್ ಔಷಧ ರೆಮ್ ಡೆಸಿವಿರ್ ಬಳಕೆ ಮಾಡಲಾಗುತ್ತದೆ. ಔಷಧದ ಮೇಲಿನ ಆಮದು ಸುಂಕವನ್ನು ಭಾರತ ಸರ್ಕಾರ ತೆರವುಗೊಳಿಸಿದೆ. ಮಂಗಳವಾರ ತಡರಾತ್ರಿ ಹಣಕಾಸು ಮಂತ್ರಾಲಯ ಅಧಿಸೂಚನೆ ಹೊರಡಿಸಿ ರೆಮ್ ಡೆಸಿವಿರ್ ಔಷಧಿ ತಯಾರಿಕೆಗೆ ಬಳಸುವ ಪದಾರ್ಥಗಳ ಆಮದು ಮೇಲಿನ ಸುಂಕವನ್ನು ರದ್ದು ಮಾಡಲಾಗಿದೆ. ಬಳಕೆಗೆ ಸಿದ್ಧವಾದ ರೆಮ್ ಡೆಸಿವಿರ್ ಇಂಜೆಕ್ಷನ್ ಮೇಲೆ ವಿನಾಯಿತಿ ನೀಡಲಾಗಿದ್ದು, ಈ ಅಧಿಸೂಚನೆ ಅಕ್ಟೋಬರ್ 31 ರವರೆಗೆ ಜಾರಿಯಲ್ಲಿರುತ್ತದೆ ಎಂದು ಹಣಕಾಸು ಮಂತ್ರಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...