alex Certify BIG NEWS: ಆದಾಯ ತೆರಿಗೆ ವಿವರ ಸಲ್ಲಿಕೆ ಗಡುವು ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆದಾಯ ತೆರಿಗೆ ವಿವರ ಸಲ್ಲಿಕೆ ಗಡುವು ವಿಸ್ತರಣೆ

ನವದೆಹಲಿ: 2022-23 ನೇ ಸಾಲಿನ ಆದಾಯ ತೆರಿಗೆ ವಿವರ -ಐಟಿಆರ್ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.

ಬಡ್ಡಿ ಹಾಗೂ ನಿಗದಿತ ದಂಡ ಶುಲ್ಕದೊಂದಿಗೆ ಆದಾಯ ತೆರಿಗೆ ವಿವರ ಸಲ್ಲಿಸಬಹುದಾಗಿದೆ. ವೈಯಕ್ತಿಕ ಹಾಗೂ ಕಾರ್ಪೊರೇಟ್ ಸಹಿತ ಎಲ್ಲಾ ವಿಭಾಗಗಳಿಗೆ ಈ ವಿಸ್ತರಣೆ ಅನ್ವಯವಾಗುತ್ತದೆ. 2022 -23ನೇ ಆರ್ಥಿಕ ವರ್ಷದ, 2023- 24ನೇ ಅಸೆಸ್ಮೆಂಟ್ ವರ್ಷದ ಐಟಿಆರ್ ಸಲ್ಲಿಕೆಗಳು 2023ರ ಜುಲೈ 31 ರಂದು ಕೊನೆಯಾಗಿತ್ತು.

ಐಟಿಆರ್ ಸಲ್ಲಿಸಲು ವಿಫಲರಾದ ವೈಯಕ್ತಿಕ ಆದಾಯ ತೆರಿಗೆದಾರರು ಡಿಸೆಂಬರ್ 31ರೊಳಗೆ ಸಲ್ಲಿಸಬಹುದೆಂದು ತಿಳಿಸಲಾಗಿದೆ. ಕಾನೂನಿನ ಅನ್ವಯ ವಿಳಂಬವಾಗಿ ಐಟಿಆರ್ ಸಲ್ಲಿಸುವವರು 5,000 ರೂ. ದಂಡ ಶುಲ್ಕ ಪಾವತಿಸಬೇಕಿದೆ. ಆದರೆ, ವಾರ್ಷಿಕ ಒಟ್ಟು ಆದಾಯ 5 ಲಕ್ಷ ರೂ.ಗಿಂತ ಕೆಳಗಿದ್ದರೆ ದಂಡದ ಪ್ರಮಾಣ 1000 ರೂ. ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...