alex Certify ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಖುಷಿ ನೀಡಿದ ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಖುಷಿ ನೀಡಿದ ಬ್ಯಾಂಕ್

ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ವಿತ್ ಡ್ರಾ ಮಾಡಿದ್ರೆ ಶುಲ್ಕ ಪಾವತಿಸಬೇಕಾಗುತ್ತದೆ. ಆದ್ರೆ ಐ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ನೆಮ್ಮದಿ ಸುದ್ದಿ ನೀಡಿದೆ. ಯಾವುದೇ ಶುಲ್ಕವಿಲ್ಲದೆ ಬಡ್ಡಿ ರಹಿತ ಮುಂಗಡ ನಗದು ಸೌಲಭ್ಯ ನೀಡುವುದಾಗಿ ಬ್ಯಾಂಕ್ ಹೇಳಿದೆ.

ಐ ಡಿ ಎಫ್ ಸಿ ಫಸ್ಟ್ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ 48 ದಿನಗಳವರೆಗೆ ಇಂಟ್ರಸ್ಟ್ ಫ್ರೀ ಕ್ಯಾಶ್ ಅಡ್ವಾನ್ಸ್ ಸೌಲಭ್ಯವನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಎಲ್ಲ ಬ್ಯಾಂಕ್ ಗಳೂ ಕ್ರೆಡಿಟ್ ಕಾರ್ಡ್ ಮೂಲಕ ಹಣ ವಿತ್ ಡ್ರಾ ಮಾಡಿದ್ರೆ ಬಡ್ಡಿ ವಸೂಲಿ ಮಾಡುತ್ತವೆ. ಪ್ರತಿ ವರ್ಗಾವಣೆಗೆ 250 ರೂಪಾಯಿಯಿಂದ 450 ರೂಪಾಯಿವರೆಗೆ ಬಡ್ಡಿ ವಸೂಲಿ ಮಾಡುವ ಬ್ಯಾಂಕ್ ಇದೆ. ಆದ್ರೆ ಐ ಡಿ ಎಫ್ ಸಿ ಫಸ್ಟ್ ಬ್ಯಾಂಕ್ ಯಾವುದೇ ರೀತಿಯ ಬಡ್ಡಿ ವಸೂಲಿ ಮಾಡದಿರಲು ನಿರ್ಧರಿಸಿದೆ.

ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಗ್ರಾಹಕರಿಗೆ ಬಡ್ಡಿ ರಹಿತ ನಗದು ಸೌಲಭ್ಯವನ್ನು ನೀಡಲಾಗುವುದು. ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕೆ ಉತ್ತೇಜನ ನೀಡಲು ಐ ಡಿ ಎಫ್ ಸಿ ಬ್ಯಾಂಕ್ ಈ ಸೌಲಭ್ಯ ಜಾರಿಗೆ ತಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...