alex Certify ವ್ಯವಹಾರ ನಿಲ್ಲಿಸಿದ 130 ವರ್ಷ ಇತಿಹಾಸವುಳ್ಳ ಫಾರ್ಮಸಿ ​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯವಹಾರ ನಿಲ್ಲಿಸಿದ 130 ವರ್ಷ ಇತಿಹಾಸವುಳ್ಳ ಫಾರ್ಮಸಿ ​..!

ಬರೋಬ್ಬರಿ 130 ವರ್ಷಗಳಿಂದ ಸೇವೆ ಸಲ್ಲಿಸಿದ್ದ ವಿನೋನಾ ಮೂಲದ ಗೋಲ್ಕ್ಟ್​​ ಫಾರ್ಮಸಿ ಕಳೆದ ವಾರ ತನ್ನ ಸೇವೆಯನ್ನ ಅಂತ್ಯಗೊಳಿಸಿದೆ. ಈ ಕಂಪನಿಯ ಎಲ್ಲಾ ಮಳಿಗೆಗಳನ್ನ ಅಮೆರಿಕದ ಎರಡನೇ ಅತಿ ದೊಡ್ಡ ಫಾರ್ಮಸಿ ವಾಲ್​ ಗ್ರೀನ್ಸ್ ಖರೀದಿಸಿದೆ.

ಒಂದು ಶತಮಾನಕ್ಕೂ ಹೆಚ್ಚು ಕಾಲದ ಇತಿಹಾಸ ಹೊಂದಿದ್ದ ಈ ಔಷಧಾಲಯ ಮುಚ್ಚಲು ಪ್ರಮುಖ ಕಾರಣ ಇದರ ವಿಮಾ ಯೋಜನೆ. ಈಗಿನ ಫಾರ್ಮಸಿ ದರದಲ್ಲಿ ಔಷಧಿಗಳನ್ನ ಖರೀದಿ ಮಾಡಲು ಅಸಾಧ್ಯವಾದ ಕಾರಣ ತಮ್ಮ ಕಂಪನಿಯನ್ನ ಬಂದ್​ ಮಾಡ್ತಿರೋದಾಗಿ ತಮ್ಮ ನಿಷ್ಠಾವಂತ ಕ್ಲೈಂಟ್ಸ್​ಗಳಿಗೆ ಗೋಲ್ಟ್ಱ್​ ಹೇಳಿದೆ

ಡಾನ್​ ಗಾಲ್ಟ್ಜ್​ ಮುತ್ತಜ್ಜ 1888ರಲ್ಲಿ ಗೋಲ್ಟ್ಜ್​​ ಫಾರ್ಮಸಿಯನ್ನ ಸ್ಥಾಪಿಸಿದ್ರು. ಡಾನ್​ ಗೋಲ್ಡ್ಜ್​ 2016ರಲ್ಲಿ ಈ ವ್ಯವಹಾರವನ್ನ ಕಾಲೋನಿ ಆರ್​ಎಎಕ್ಸ್​ ಎಂಬ ಸಣ್ಣ ಸಂಸ್ಥೆಗೆ ಮಾರಾಟ ಮಾಡಿದ್ದರು. ಅಮೆರಿಕದ ಅನೇಕ ಔಷಧಿ ಕಂಪನಿಗಳು ಇದೇ ರೀತಿಯ ಸವಾಲುಗಳನ್ನ ಎದುರಿಸುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...