alex Certify ಡಿಜಿಟಲ್ ಜಾಹೀರಾತಿಗೆ ಹೊಸ ನೀತಿ: ಇನ್ನು ಸಾಮಾಜಿಕ ಜಾಲತಾಣದಲ್ಲೂ ಸರ್ಕಾರಿ ಜಾಹೀರಾತು ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಜಿಟಲ್ ಜಾಹೀರಾತಿಗೆ ಹೊಸ ನೀತಿ: ಇನ್ನು ಸಾಮಾಜಿಕ ಜಾಲತಾಣದಲ್ಲೂ ಸರ್ಕಾರಿ ಜಾಹೀರಾತು ಪ್ರಕಟ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿಯೂ ಸರ್ಕಾರಿ ಜಾಹೀರಾತು ಪ್ರಕಟಿಸಲು ಅವಕಾಶ ಕಲ್ಪಿಸುವ ಜಾಹೀರಾತು ನೀತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಪ್ರತಿ ತಿಂಗಳು ಕನಿಷ್ಠ 2.5 ಲಕ್ಷ ಬಳಕೆದಾರರನ್ನು ಹೊಂದಿದ ವೆಬ್ಸೈಟ್ ಗಳು, ಒಟಿಟಿ ಹಾಗೂ ಪಾಡ್ ಕಾಸ್ಟ್ ಗಳ ರೀತಿಯ ಡಿಜಿಟಲ್ ವೇದಿಕೆಗಳಲ್ಲಿ ಸರ್ಕಾರಿ ಜಾಹೀರಾತು ನೀಡಲು ಅವಕಾಶ ಕಲ್ಪಿಸುವ ಡಿಜಿಟಲ್ ಜಾಹೀರಾತು ನೀತಿಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ವತಿಯಿಂದ ರೂಪಿಸಲಾಗಿದೆ.

ಡಿಜಿಟಲ್ ಮಾಧ್ಯಮಗಳಲ್ಲಿಯೂ ಪ್ರಚಾರ ನಡೆಸಲು ಕೇಂದ್ರೀಯ ಸಂವಹನ ಬ್ಯುರೋಗೆ(CBC) ಈ ನೀತಿ ಅಧಿಕಾರ ನೀಡುತ್ತದೆ. ವೆಬ್ಸೈಟ್ ಗಳನ್ನು ಪಟ್ಟಿ ಮಾಡುವ ಪ್ರಕ್ರಿಯೆ ಸರಳಗೊಳಿಸುವವುದರೊಂದಿಗೆ ಮೊಬೈಲ್ ಆಪ್ ಗಳ ಮೂಲಕ ಸಾರ್ವಜನಿಕ ಸೇವಾ ಆಂದೋಲನ ಸಂದೇಶಗಳನ್ನು ಪ್ರಸಾರ ಮಾಡಲು ಇದರಿಂದ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ.

ಹೊಸ ನೀತಿ ಅನ್ವಯ ಜಾಹೀರಾತು ದರಕ್ಕೆ ಸ್ಪರ್ಧಾತ್ಮಕ ಬಿಲ್ಡಿಂಗ್ ವ್ಯವಸ್ಥೆ ಪರಿಚಯಿಸಲಾಗಿದ್ದು, ಇದು ಪಾರದರ್ಶಕತೆಯನ್ನು ಖಾತರಿಪಡಿಸುತ್ತದೆ. ಈ ಮೂಲಕ ಆವಿಷ್ಕರಿಸಲಾದ ದರಗಳು ಮೂರು ವರ್ಷಕ್ಕೆ ಸಿಂಧುವಾಗಿರಲಿವೆ. ಎಲ್ಲಾ ಅರ್ಹ ಏಜೆನ್ಸಿಗಳಿಗೆ ಅನ್ವಯವಾಗುತ್ತವೆ. ಕೇಂದ್ರೀಯ ಸಂವಹನ ಬ್ಯುರೋ ಪಟ್ಟಿಗೆ ಸೇರಲು ವೆಬ್ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್ ಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ 20 ದಶಲಕ್ಷಕ್ಕೂ ಅಧಿಕ ಬಳಕೆದಾರರು –ಎ ಪ್ಲಸ್, 10 ರಿಂದ 20 ದಶಲಕ್ಷ ಬಳಕೆದಾರರು –ಎ, 5 ರಿಂದ 10 ಲಕ್ಷ ದಶಲಕ್ಷ ಬಳಕೆದಾರರು -ಬಿ, 0.25 ರಿಂದ 5 ದಶಲಕ್ಷ ಬಳಕೆದಾರರು –ಸಿ ಎಂದು ಪರಿಗಣಿಸಲಾಗುವುದು.

ಭಾರತದಲ್ಲಿ 880 ದಶಲಕ್ಷಕಿಂತ ಅಧಿಕ ಇಂಟರ್ನೆಟ್ ಸಂಪರ್ಕವಿದೆ. 172 ದಶಲಕ್ಷಕ್ಕೂ ಹೆಚ್ಚು ಟೆಲಿಕಾಂ ಚಂದಾದಾರರಿದ್ದಾರೆ. ಪ್ರಸ್ತುತ ಸಾಮಾಜಿಕ ಮಾಧ್ಯಮ ವೇದಿಕೆಗಳು ಸಾರ್ವಜನಿಕ ಸಂವಹನಕ್ಕೆ ಜನಪ್ರಿಯ ಮಾರ್ಗಗಳಾಗಿವೆ. ವಿವಿಧ ವೇದಿಕೆಗಳ ಮೂಲಕ ಹೆಚ್ಚು ಜನರನ್ನು ತಲುಪುವಂತಾಗಲು ಸರ್ಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಜಾಹೀರಾತು ನೀಡುವ ಪ್ರಕ್ರಿಯೆಯನ್ನು ಈ ನೀತಿ ಸರಳಗೊಳಿಸಿದೆ. ಡಿಜಿಟಲ್ ಮಾಧ್ಯಮ ಏಜೆನ್ಸಿಗಳನ್ನು ಪಟ್ಟಿಗೆ ಸೇರಿಸಲು ಈ ನೀತಿಯಿಂದ ಸಿಬಿಸಿಗೆ ಅಧಿಕಾರ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...