ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್ ಸೇರಿದಂತೆ ವಿವಿಧ ಒಟಿಟಿ ಫ್ಲಾಟ್ಫಾರಂಗಳಲ್ಲಿ ಸಿನಿಮಾ ಹಾಗೂ ವೆಬ್ ಸಿರೀಸ್ಗಳನ್ನ ನೋಡಬೇಕು ಅಂದರೆ ಹಣ ಪಾವತಿ ಮಾಡಬೇಕಾಗುತ್ತದೆ. ಆದರೆ ನೀವು ಈ ಒಟಿಟಿ ವೇದಿಕೆಗಳ ಚಂದಾದಾರಿಕೆಯನ್ನ ಉಚಿತವಾಗಿಯೂ ಪಡೆಯಬಹುದು. ಇದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ. ನಿಮ್ಮ ಮೊಬೈಲ್ ರೀಚಾರ್ಜ್ ಪ್ಲಾನ್ನ್ನು ಯೋಚನೆ ಮಾಡಿ ಆಯ್ಕೆ ಮಾಡಿಕೊಂಡರೆ ಉಚಿತ ಚಂದಾದಾರಿಕೆ ನಿಮ್ಮದಾಗಲಿದೆ.
ರಿಲಯನ್ಸ್ ಜಿಯೋ : ರಿಲಾಯನ್ಸ್ ಜಿಯೋದಲ್ಲಿರುವ 399 ರೂಪಾಯಿಯ ಪೋಸ್ಟ್ಪೇಯ್ಡ್ ಪ್ಲಾನ್ ಮೂಲಕ ನೀವು ಓಟಿಟಿ ವೇದಿಕೆಯಲ್ಲಿ ಉಚಿತ ಚಂದಾದಾರಿಕೆ ಪಡೆಬಹುದಆಗಿದೆ. ಇದರಲ್ಲಿ 75 ಜಿಬಿ ಡೇಟಾ ಸಿಗಲಿದ್ದು ಈ ಡೇಟಾ ಖಾಲಿಯಾದ ಬಳಿಕ ಪ್ರತಿ ಜಿಬಿಗೆ 10 ರೂಪಾಯಿ ವೆಚ್ಚವಾಗಲಿದೆ. ಅನಿಯಮಿತ ಕರೆ, 100 ಉಚಿತ ಎಸ್ಎಂಎಸ್ ಕೂಡ ಸಿಗಲಿದೆ. ಇದರ ಜೊತೆಯಲ್ಲಿ ನಿಮಗೆ ಜಿಯೋ ಟಿವಿ, ಜಿಯೋ ಸಿನಿಮಾಗಳಲ್ಲಿ ಉಚಿತ ಚಂದಾದಾರಿಕೆ ಸಿಗಲಿದೆ.
ಗ್ರಾಹಕರು ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಹಾಗೂ ಡಿಸ್ನೇ ಪ್ಲಸ್ ಹಾಟ್ಸ್ಟಾರ್ ಚಂದಾದಾರಿಕೆಯನ್ನೂ ಉಚಿತವಾಗಿ ಪಡೆಯಬಹುದಾಗಿದೆ. ಇದಕ್ಕಾಗಿ ಗ್ರಾಹಕರು ಮೊದಲು ಮೈ ಜಿಯೋ ಅಪ್ಲಿಕೇಶನ್ನ್ನು ಡೌನ್ಲೋಡ್ ಮಾಡಬೇಕು. ಇದರಲ್ಲಿ ಲಾಗಿನ್ ಆದ ಬಳಿಕ ನೆಟ್ಫ್ಲಿಕ್ಸ್ ಆಕ್ಟಿವೇಷನ್ ಬ್ಯಾನರ್ನಲ್ಲಿ ನಿಮಗೆ ಈ ಅಪ್ಲಿಕೇಶನ್ನ ಹೋಂಪೇಜ್ ಕಾಣಿಸಲಿದೆ. 199 ರೂಪಾಯಿ ಮೌಲ್ಯದ ಮೊಬೈಲ್ ಓನ್ಲಿ ನೆಟ್ಫ್ಲಿಕ್ಸ್ ಪ್ಲಾನ್ ಸಿಗಲಿದೆ. ಇದೇ ವಿಧಾನವನ್ನ ಅಮೆಜಾನ್ ಪ್ರೈಮ್ಗೂ ಬಳಸಬಹುದಾಗಿದೆ.
ATM ನಲ್ಲಿ ನಕಲಿ ನೋಟು ಬಂದ ವೇಳೆ ಮಾಡಬೇಕಾದ್ದೇನು….? ಇಲ್ಲಿದೆ ಸಂಪೂರ್ಣ ವಿವರ
ಏರ್ಟೆಲ್ 499 ರೂಪಾಯಿ ಮೌಲ್ಯದ ಪೋಸ್ಟ್ಪೇಯ್ಡ್ ಪ್ಲಾನ್ ಕೂಡ ಜಿಯೋ 399 ರೂಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ನಂತೆಯೇ ಇದೆ. ಇದರಲ್ಲಿ ನಿಮಗೆ ಒಂದು ವರ್ಷಗಳ ಕಾಲ ಅಮೆಜಾನ್ ಪ್ರೈಂ ವಿಡಿಯೋ ಹಾಗೂ ಡಿಸ್ನೆ ಪ್ಲಸ್ ಹಾಟ್ಸ್ಟಾರ್ನ ವಿಐಪಿ ಚಂದಾದಾರಿಕೆ ಉಚಿತವಾಗಿ ಸಿಗಲಿದೆ. ಆದರೆ ಏರ್ಟೆಲ್ನ ಯಾವುದೇ ಪ್ಲಾನ್ನಲ್ಲಿ ನೆಟ್ಫ್ಲಿಕ್ಸ್ ಸೌಕರ್ಯ ಇರೋದಿಲ್ಲ.
ನೀವು ವೋಡಾಫೋನ್ನಲ್ಲಿ ಒಟಿಟಿ ಉಚಿತ ಚಂದಾದಾರಿಕೆಯನ್ನ ಅರಸುತ್ತಿದ್ದರೆ 499 ರೂಪಾಯಿಯ ಪ್ಯಾಕ್ನ್ನು ನೀವು ಆಯ್ಕೆ ಮಾಡಬಹುದಾಗಿದೆ. ಈ ಪ್ಯಾಕ್ನಲ್ಲಿ ನಿಮಗೆ ಅಮೆಜಾನ್ ಪ್ರೈಮ್ ವಿಡಿಯೋ, ಜಿ 5 ಉಚಿತ ಚಂದಾದಾರಿಕೆ ಸಿಗಲಿದೆ. ಆದರೆ ವೋಡಾಫೋನ್ – ಐಡಿಯಾದ ಯಾವುದೇ ಪ್ಲಾನ್ನಲ್ಲಿ ನಿಮಗೆ ಹಾಟ್ಸ್ಟಾರ್ ಹಾಗೂ ನೆಟ್ಫ್ಲಿಕ್ಸ್ಗೆ ಉಚಿತ ಚಂದಾದಾರಿಕೆ ಸಿಗೋದಿಲ್ಲ.