alex Certify ʼಆಧಾರ್ʼ ಕಳೆದುಕೊಂಡಿದ್ದೀರಾ…? ಆನ್‌ ಲೈನ್‌ ಮೂಲಕ ಕಾರ್ಡ್‌ ಪಡೆಯಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್ʼ ಕಳೆದುಕೊಂಡಿದ್ದೀರಾ…? ಆನ್‌ ಲೈನ್‌ ಮೂಲಕ ಕಾರ್ಡ್‌ ಪಡೆಯಲು ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಇಲ್ಲವೆಂದ್ರೆ ಅನೇಕ ಕೆಲಸಗಳಿಗೆ ಅಡ್ಡಿಯಾಗಲಿದೆ. ಆಧಾರ್ ಕಾರ್ಡ್ ನಮ್ಮ ಬಳಿಯಿರುವುದು ಬಹಳ ಮುಖ್ಯ. ಕೆಲವೊಮ್ಮೆ ನಮ್ಮ ನಿರ್ಲಕ್ಷ್ಯದಿಂದಾಗಿ ಆಧಾರ್ ಕಾರ್ಡ್ ಕಳೆದು ಹೋಗುತ್ತದೆ. ಆಗ ಆತಂಕ ಬೇಡ. ಆನ್ಲೈನ್ ಮೂಲಕ ನೀವು ಮತ್ತೆ ಆಧಾರ್ ಕಾರ್ಡ್ ಪಡೆಯಬಹುದು.

ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ www.uidai.gov.in ಗೆ ಹೋಗಬೇಕು. ಆಧಾರ್ ಸೇವಾ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. Order Aadhaar Reprint ಮೇಲೆ ಕ್ಲಿಕ್ ಮಾಡಿದಾಗ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ 12-ಅಂಕಿಯ ಆಧಾರ್ ಸಂಖ್ಯೆ ಅಥವಾ 16-ಅಂಕಿಯ ವರ್ಚುವಲ್ ಐಡಿ ಸಂಖ್ಯೆಯನ್ನು ಸಲ್ಲಿಸಬೇಕು. ನಂತ್ರ ಮೊಬೈಲ್ ಸಂಖ್ಯೆಯನ್ನು ಹಾಕಬೇಕು. ಸಂಖ್ಯೆಯನ್ನು ನಮೂದಿಸಿದ ತಕ್ಷಣ ನಿಮ್ಮ ಫೋನ್‌ಗೆ ಒಟಿಪಿ ಬರುತ್ತದೆ.

ಒಟಿಪಿ ಸಲ್ಲಿಸಿದ ನಂತ್ರ ನಿಯಮಗಳಿಗೆ ಒಪ್ಪಿಗೆ ನೀಡಬೇಕು. ಮುಂದಿನ ಪೇಜ್ ನಲ್ಲಿ ಹಣ ಪಾವತಿಸುವಂತೆ ಕೇಳಲಾಗುತ್ತದೆ. ಯಾವುದೇ ರೀತಿಯಲ್ಲಿ ಆನ್ಲೈನ್ ಮೂಲಕ ನಿಗದಿಪಡಿಸಿದ ಮೊತ್ತ ಪಾವತಿ ಮಾಡಬೇಕು, ಪಾವತಿಸಿದ ನಂತ್ರ ರಶೀದಿ ಬರುತ್ತದೆ. ಅದನ್ನು ಡೌನ್ಲೋಡ್ ಮಾಡಬೇಕು. ಯುಐಡಿಎಐ ನೀವು ನೀಡಿದ ವಿಳಾಸಕ್ಕೆ ಹೊಸ ಆಧಾರ್ ಕಾರ್ಡ್ ಮುದ್ರಿಸಿ ಕಳಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...