alex Certify ಫೇಸ್ಬುಕ್ ಮೂಲಕ ನಿಮ್ಮ ಇಮೇಲ್ ವಿಳಾಸ ಲೀಕ್ ಆಗಿದೆಯೇ…? ಹೀಗೆ ಚೆಕ್‌ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್ಬುಕ್ ಮೂಲಕ ನಿಮ್ಮ ಇಮೇಲ್ ವಿಳಾಸ ಲೀಕ್ ಆಗಿದೆಯೇ…? ಹೀಗೆ ಚೆಕ್‌ ಮಾಡಿ

ಇತ್ತೀಚೆಗೆ 53.3 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾದ ಬಳಿಕ ಫೇಸ್ಬುಕ್‌ ತನ್ನ ಬಳಕೆದಾರರ ನಂಬಿಕೆಯನ್ನು ಇನ್ನಷ್ಟು ಕಳೆದುಕೊಂಡಿದೆ. ವೈಯಕ್ತಿಕ ಮಾಹಿತಿಯ ಭದ್ರತೆ ವಿಚಾರವಾಗಿ ಫೇಸ್ಬುಕ್‌ ಸುರಕ್ಷಿತವಲ್ಲ ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿ ಬರುತ್ತಲೇ ಇತ್ತು.

ಲೀಕ್ ಆಗಿರುವ ಮಾಹಿತಿಗಳಲ್ಲಿ ಬಳಕೆದಾರರ ದೂರವಾಣಿ ವಿವರಗಳು, ಇಮೇಲ್ ವಿಳಾಸ, ಜನ್ಮದಿನಾಂಕ, ಫೇಸ್ಬುಕ್ ಐಡಿ, ಬಳಕೆದಾರರ ದೂರವಾಣಿ ಸಂಖ್ಯೆ, ಬಯೋ ಸೇರಿದಂತೆ ಬಹಳ ಸೂಕ್ಷ್ಮ ಮಾಹಿತಿಗಳು ಇವೆ.

ಈ ಡೇಟಾ ಲೀಕ್‌ ಕಾಂಡದಲ್ಲಿ ಭಾರತದ ಆರು ದಶಲಕ್ಷ ಮಂದಿಯ ಮಾಹಿತಿಗಳೂ ಸಹ ಲೀಕ್ ಆಗಿದ್ದು, ಅವರನ್ನು ಸೈಬರ್‌ ಅಪರಾಧದಲ್ಲಿ ಸಿಲುಕುವ ರಿಸ್ಕ್ ತಂದಿಟ್ಟಿದೆ. ಹಂತಕರು ಈ ಬಳಕೆದಾರರ ಮಾಹಿತಿ ಪಡೆದುಕೊಂಡು ವಿಧ್ವಂಸಕ ಕೆಲಸಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಸ್ಟಂಟ್​ ಮೂಲಕವೇ ʼವಿಶ್ವ ದಾಖಲೆʼ ನಿರ್ಮಿಸಿದ ಪುಟ್ಟ ಪೋರಿ

ನಿಮ್ಮ ಇಮೇಲ್ ವಿಳಾಸ ಸಹ ಲೀಕ್ ಆಗಿದೆಯೇ ಎಂದು ಚೆಕ್ ಮಾಡಲು ಕೆಳಗೆ ಕಂಡ ಸೈಟ್‌ಗೆ ಭೇಟಿ ಕೊಟ್ಟು ಪರೀಕ್ಷೆ ಮಾಡಬಹುದಾಗಿದೆ. ಆದರೂ ಸಹ ಈ ಸಂದರ್ಭದಲ್ಲಿ ಅನ್ಯ ಜಾಲತಾಣಗಳಿಗೆ ನಿಮ್ಮ ಇಮೇಲ್ ವಿಳಾಸವನ್ನು ಕೊಡುತ್ತಿರುವ ಕಾರಣ ಬಹಳ ಎಚ್ಚರಿಕೆಯಿಂದ ಇರಲು ತಿಳಿಸುತ್ತೇವೆ.

1. https://haveibeenpwned.comಗೆ ಭೇಟಿ ಕೊಡಿ.

2. ಫೇಸ್ಬುಕ್ ಖಾತೆಗೆ ಹೊಂದಿಕೊಂಡಿರುವ ನಿಮ್ಮ ಇಮೇಲ್ ವಿಳಾಸವನ್ನು ಅಲ್ಲಿ ಎಂಟರ್‌ ಮಾಡಿ.

3. ಇಷ್ಟು ಸಾಕು. ನಿಮ್ಮ ಇಮೇಲ್ ವಿಳಾಸ ಲೀಕ್ ಆಗಿದೆಯೇ ಇಲ್ಲವೇ ಎಂದು ಫಲಿತಾಂಶಗಳು ತಿಳಿಸುತ್ತವೆ.

4. ನಿಮ್ಮ ಇಮೇಲ್ ಐಡಿ ಬೇರೆಲ್ಲಾದರೂ ಲೀಕ್ ಆಗಿದೆಯೇ ಎಂದೂ ಸಹ ತಿಳಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...